ವಸ್ತ್ರೋದ್ಯಮದ ಹರಿಕಾರ ಅರವಿಂದ್ ಲಾಲ್ ಭಾಯಿ ಇನ್ನಿಲ್ಲ

Arvind Lalbhai, king of denim, passes away ಅಹಮದಾಬಾದ್, ಆಗಸ್ಟ್ 04 : ಅರವಿಂದ್ ಸಮೂಹ ಸಂಸ್ಥೆಯ ಮಾಲೀಕ, ದೇಶದಲ್ಲಿ ವಸ್ತ್ರ ವಿನ್ಯಾಸ ಉದ್ಯಮದಲ್ಲಿ ಹೊಸ ಅಧ್ಯಾಯ ಶುರು ಮಾಡಿದ ಅರವಿಂದ್ ನರೋತ್ತಮ್ ಲಾಲ್ ಭಾಯಿ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

3ದಶಕಕ್ಕೂ ಅಧಿಕ ಕಾಲ ದೇಶದ ಅತಿ ದೊಡ್ಡ ವಸ್ತ್ರ ಉದ್ಯಮ ಸಂಸ್ಥೆಗಳಲ್ಲಿ ಒಂದಾದ ಅರವಿಂದ್ ಮಿಲ್ಲನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಲಾಲ್ ಭಾಯ್ ದೇಶದ ಅತ್ಯುತ್ತಮ ಉದ್ಯಮಿಗಳಲ್ಲಿ ಒಬ್ಬರು.

ಲಾಲ್ ಭಾಯಿ ಅವರ ಹೆಗ್ಗಳಿಕೆ ಮತ್ತು ಸಾಧನೆ :

  • 1918 ಏಪ್ರಿಲ್ 3ರಂದು ಜನನ.
  • ಬಾಂಬೆಯ ಅಶೋಕಮಿಲ್ಸ್ ನಲ್ಲಿ ಉದ್ಯೋಗ ಪ್ರಾರಂಭ. ಟೆಕ್ಸ್ ಟೈಲ್ ಉದ್ಯಮದ ಅನೇಕ ಮಿಲ್ ಗಳಲ್ಲಿ ಮುಖ್ಯಸ್ಥರಾಗಿ, ಅಧ್ಯಕ್ಷೀಯ ಮಂಡಳಿಯ ಸದಸ್ಯರಾಗಿ ಸೇವೆ.
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗುಜರಾತ್ ಫೈನಾನ್ಸ್ ಕಾರ್ಪೊರೇಷನ್, ಗುಜರಾತ್ ವೇರ್ ಹೌಸ್ ಕಾರ್ಪೋರೇಷನ್ ಅಧ್ಯಕ್ಷೀಯ ಮಂಡಳಿಯಲ್ಲಿ ಸೇವೆ.
  • 1981ರಲ್ಲಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾಗಿ, ದೇಶದ ಆರ್ಥಿಕ ಸುಧಾರಣೆಗೆ ಉನ್ನತ ತಂತ್ರಜ್ಞಾನ ಬಳಕೆಯ ಬಗ್ಗೆ ಒತ್ತು ನೀಡಿದ ಹೆಗ್ಗಳಿಕೆ.
  • ಅಂಗವಿಕಲರಿಗೆ, ಅಂಧರಿಗೆ, ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಅನೇಕ ಸಂಸ್ಥೆಗಳ ಸ್ಥಾಪಕ.
  • ಅಹಮದಾಬಾದಿನ ಐಐಐಂನ ಅಧ್ಯಕ್ಷೀಯ ಮಂಡಳಿಯಲ್ಲಿದ್ದ ಲಾಲ್ ಭಾಯಿ ಗುಜರಾತಿನ ಕ್ರೀಡಾಳುಗಳಿಗೆ ನೆರವು.
  • ಅಹಮದಾಬಾದಿನ ಸುತ್ತಮುತ್ತಲಿನ ಅನೇಕ ಗ್ರಾಮಗಳನ್ನು ದತ್ತು ತೆಗೆದುಕೊಂಡು ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ.
  • ಅರವಿಂದ್ ಮಿಲ್ ನಲ್ಲಿ ತಯಾರಾದ ಫ್ರಾಬ್ರಿಕ್ , ಸಿದ್ಧ ಉಡುಪು, ಡೆನಿಮ್ ಬಟ್ಟೆಗಳಿಗೆ ದೇಶ ವಿದೇಶಗಳಲ್ಲಿ ಬೇಡಿಕೆ.
(ಏಜನ್ಸೀಸ್)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+