ಶಾಲಾಮಹಡಿಯಿಂದ ಬಿದ್ದ ಸೋನಿ ಪುಟ್ಟಿ ಉಳಿಯಲಿಲ್ಲ!

ಬೆಂಗಳೂರು, ಜುಲೈ 18 : ಗರುಡ ಮಾಲ್‌ನಲ್ಲಿ ಬಾಲಕನೊಬ್ಬ ಮೃತಪಟ್ಟ ದುರಂತ ಕಣ್ಣಮುಂದಿರುವಾಗಲೇ, ಐದು ವರ್ಷದ ಬಾಲಕಿಯೊಬ್ಬಳು ಶಾಲೆಯ ಮಹಡಿಯಿಂದ ಬಿದ್ದು ಬುಧವಾರ ಸಾವನ್ನಪ್ಪಿದ್ದಾಳೆ.

ಬಸವನಗುಡಿಯ ವಾಸವಿ ವಿದ್ಯಾ ಶಾಲೆಯ ನರ್ಸರಿ ವಿದ್ಯಾರ್ಥಿನಿ ಸೋನಿಯಾ ಸಿಂಗ್‌ಳನ್ನು, ಜಯನಗರ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ದಾಖಲಿಸಲಾಗಿತ್ತು.

ಮಾವಳ್ಳಿ ನಿವಾಸಿ ಅನಂತರಾಮು ಮತ್ತು ಉಮಾಬಾಯಿಯ ಪುತ್ರಿಯಾದ ಸೋನಿಯಾ, ಎಂದಿನಂತೆ ಶಾಲೆಗೆ ತೆರಳಿದ್ದಳು. ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು, ಸೋನಿಯಾಳನ್ನು ಎರಡನೇ ಮಹಡಿಗೆ ಕರೆದೊಯ್ದ, ಅಲ್ಲಿ ಕಟ್ಟೆ ಮೇಲೆ ಕೂರಿಸಿಕೊಂಡು ಮುದ್ದಿಸುತ್ತಿದ್ದಳು. ಸೋನಿಯಾ ಕೊಸರಾಡಿ, ಆಯತಪ್ಪಿ ಕೆಳಕ್ಕೆ ಬಿದ್ದಳು ಎನ್ನುವುದು ಮುಖ್ಯ ಶಿಕ್ಷಕಿ ಮಾಲತಿ ಅವರ ಹೇಳಿಕೆ.

ಸೋನಿಯಾ ಕೂತಿದ್ದ ಎರಡನೇ ಮಹಡಿಯಲ್ಲಿನ ಕಟ್ಟೆ ಕೇವಲ 2ಅಡಿ ಎತ್ತರವಿದೆ. ಈ ಘಟನೆಗೆ ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ದೂರಿದ್ದಾರೆ.

ಶಾಲೆಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಈ ದುರಂತದಿಂದ ಕೇಳಿ ಬರುತ್ತಿದೆ. ಹೆತ್ತವರೇ, ಒಂದು ಸಲ ನಿಮ್ಮ ಮಗು ಹೋಗುವ ಶಾಲೆಗೆ ಹೋಗಿ ಬನ್ನಿ... ಅಲ್ಲಿ ನಿಮ್ಮ ಮಗು ಎಷ್ಟು ಸುರಕ್ಷಿತ ಎಂಬುದನ್ನು ಅವಲೋಕಿಸಿ. ಸಲಹೆಗಳಿದ್ದರೇ, ಶಾಲೆಯ ಆಡಳಿತ ಮಂಡಳಿ ಗಮನಕ್ಕೆ ತನ್ನಿ. ಉದಾಸೀನ ಬೇಡ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+