ಹನೀಫ್ ಮೊಹಮ್ಮದ್ ವೀಸಾ ರದ್ದು ತೆರವಿಗೆ ಮೇಲ್ಮನವಿ
ಮೆಲ್ಬೋರ್ನ್, ಜುಲೈ 18 : ಲಂಡನ್‌ನ ಗ್ಲಾಸ್ಗೋ ವಿಮಾನ ನಿಲ್ದಾಣವನ್ನು ಸ್ಫೋಟಿಸಲು ವಿಫಲ ಯತ್ನ ನಡೆಸಿದ ಆರೋಪಿಗಳಿಗೆ ಸಹಕರಿಸಿದ ಆರೋಪ ಹೊತ್ತಿರುವ ಹನೀಫ್ ಮೊಹಮ್ಮದ್ ಅವರ ವಕೀಲರು ರದ್ದುಪಡಿಸಲಾದ ವೀಸಾ ತೆರವಿಗೆ ಬುಧವಾರ ಮೇಲ್ಮನವಿ ಸಲ್ಲಿಸಿದ್ದಾರೆ.
ತನ್ನ ಸಚ್ಚಾರಿತ್ರ್ಯವನ್ನು ರುಜುವಾತುಪಡಿಸಲು ವಿಫಲನಾದ ಕಾರಣ ಹೇಳಿ ಹನೀಫ್‌ರ ವೀಸಾವನ್ನು ರದ್ದುಪಡಿಸಿ ವಲಸೆ ಬಂಧನದಲ್ಲಿ ಇರಿಸಲಾಗಿದೆ. ಈ ಕಾರಣಕ್ಕೆ ವಲಸೆ ಸಚಿವ ಕೆವಿನ್ ಆಂಡ್ರ್ಯೂಸ್ ಆಸ್ಟ್ರೇಲಿಯಾದ ವಕೀಲರ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಫೆಡರಲ್ ಪೊಲೀಸ್‌ರೊಂದಿಗೆ ನಡೆಸಿದ ಮಾತುಕತೆಗಳ ದಾಖಲೆಗಳನ್ನು ನಿಯತಕಾಲಿಕವೊಂದು ಬಹಿರಂಗಪಡಿಸಿದ ಕಾರಣ ಹನೀಫ್‌ರ ಆಸ್ಟ್ರೇಲಿಯಾದ ವಕೀಲ ಪೀಟರ್ ರುಸ್ಸೊ ಮೇಲ್ಮನವಿಯ ಅಂಶಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.
ಈ ನಡುವೆ, ಹನೀಫ್ ಅವರು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ನಿಷೇಧಿತ ಸ್ಟುಡೆಂಟ್ ಇಸ್ಲಾಮಿಕ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ)ದ ಹಿರಿಯ ಸದಸ್ಯ ಆಗಿದ್ದ ಎಂಬ ಏಷಿಯನ್ ಏಜ್‌ನ ವರದಿಯನ್ನು ಸತ್ಯಕ್ಕೆ ದೂರು ಎಂದು ತಿಳಿಸಿದ್ದಾರೆ.
ಏಕಾಂತ ಬಂಧನ : ಕ್ವೀನ್ಸ್‌ಲ್ಯಾಂಡ್‌ನ ಜೈಲಿನಲ್ಲಿ ಭಯೋತ್ಪಾದಕ ಹನೀಫ್‌ರನ್ನು ಸಂಪೂರ್ಣ ಏಕಾಂತದಲ್ಲಿ ಇರಿಸಲಾಗಿದೆ. ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಇಪ್ಪತ್ಮೂರು ಗಂಟೆ ಹನೀಫ್‌ರನ್ನು ಒಬ್ಬಂಟಿಯಾಗಿ ವಿಶೇಷ ಕೋಣೆಯಲ್ಲಿ ಕೂಡಿಡಲಾಗುತ್ತಿದೆ. ಈ ಸಮಯದಲ್ಲಿ ಅವರು ಯಾರನ್ನೂ ಭೇಟಿಯಾಗುವಂತಿಲ್ಲ.
(ಯುಎನ್‌ಐ)
ಪೂರಕ ಓದಿಗೆ :
ವಿಚಾರಣೆಯ ನಂತರ ಹನೀಫ್ ಮೊಹಮ್ಮದ್ ಭಾರತಕ್ಕೆ
ಹನೀಫ್ ಮೊಹಮ್ಮದ್ ಬಿಡುಗಡೆ : ಕಭಿ ಹಾ, ಕಭಿ ನಾ!
ಅಂತೂ ಡಾ.ಹನೀಫ್ ಅಹಮದ್‌ಗೆ ಷರತ್ತಿನ ಜಾಮೀನು!
ಬಿಡುಗಡೆಯಾಗಬೇಕಿದ್ದ ಹನೀಫ್ ವಿರುದ್ಧ ಆರೋಪಪಟ್ಟಿ
ಗ್ಲಾಸ್ಗೋ ದಾಳಿ : ಕಫೀಲ್ ಸಂಬಂಧಿ ಹನೀಫ್ ನಿರಪರಾಧಿ












Click it and Unblock the Notifications