ಅಮೆರಿಕದ ಬಾಲೆ ಎವರೆಸ್ಟ್ ಶಿಖರ ಏರಿ ಭರ್ಜರಿ ದಾಖಲೆ!
ಕಠ್ಮಂಡು : ಅಮೆರಿಕದ 19 ವರ್ಷ ವಯಸ್ಸಿನ ಸಮಂತಾ ಲಾರ್ಸನ್, ಜಗತ್ತಿನ ಅತಿ ಎತ್ತರದ ಎವರೆಸ್ಟ್ ಪರ್ವತವನ್ನು ಏರಿದ ಅತಿ ಕಿರಿಯ ವಯಸ್ಸಿನ ವಿದೇಶಿಬಾಲೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 8,848 ಮೀಟರ್ ಎತ್ತರವಿರುವ ಎವರೆಸ್ಟ್ ಶಿಖರದ ತುದಿಯನ್ನು, ಗುರುವಾರ ಬೆಳಗ್ಗೆ ಸಮಂತಾ ತಲುಪಿದ್ದಾರೆ. ಸಮಂತಾ ಅವರು ಎವರೆಸ್ಟ್ ಏರಿದ ಅತಿ ಕಿರಿಯ ಮಹಿಳೆ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ತನ್ನ ಪ್ರಕಟಣೆಯಲ್ಲಿ ಶುಕ್ರವಾರ ಹೇಳಿದೆ.
ಸಮಂತಾ ಅವರ ಜತೆ ಅವರ ತಂದೆ ಡೇವಿಡ್ ಡಿ ಲಾರ್ಸನ್ ಹಾಗೂ ತಂಡದ ಉಳಿದ ಸದಸ್ಯರಾದ ಡಗ್ಲಾಸ್ ಬೀಲ್, ಬ್ರೆಟನ್ನಿನ ಅಂಥೋಣಿ ವಿಕ್ಟರ್, ಜೇಮ್ಸ್ ಕೆರ್ ಕೂಡ ಎವರೆಸ್ಟ್ ಏರಿದ್ದಾರೆ.
(ಏಜನ್ಸೀಸ್)












Click it and Unblock the Notifications