ಅಬಕಾರಿ ಸುಂಕ ಕಡಿತ : ಸಿಮೆಂಟ್, ಬಿಸ್ಕತ್ತು, ಬೀಡಿ ಅಗ್ಗ
ನವದೆಹಲಿ : ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಶೇ.12ರಷ್ಟು ಕಡಿಮೆ ಮಾಡಿದ ಪರಿಣಾಮ, ಸಿಮೆಂಟ್ ದರದಲ್ಲಿ ಚೀಲವೊಂದಕ್ಕೆ 7 ರೂಪಾಯಿ ಕಡಿಮೆಯಾಗಲಿದೆ.
ಉದ್ಯಮಗಳ ಬೇಡಿಕೆಗೆ ಮಣಿದಿರುವ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ, ಅಬಕಾರಿ ಮತ್ತು ಕಸ್ಟಮ್ಸ್ ಸುಂಕ ಇಳಿಸಿದ್ದಾರೆ. ಈ ಬದಲಾವಣೆಗಳೊಂದಿಗೆ ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಅವರು ಮಂಡಿಸಿದ್ದಾರೆ.
ಈ ಪರಿಣಾಮ ಸಿಮೆಂಟ್, ಬಿಸ್ಕತ್ತು, ಸೋಯಾ, ಬೀಡಿ ಮತ್ತಿತರ ವಸ್ತುಗಳ ದರದಲ್ಲಿ ಇಳಿಕೆಯಾಗಲಿದೆ. ಆದರೆ ನಿರೀಕ್ಷಿಸಿದಂತೆಯೇ ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೋರೇಟ್ ಆದಾಯ ತೆರಿಗೆದಾರರಿಗೆ ಯಾವುದೇ ರಿಯಾಯಿತಿಗಳು ಪ್ರಕಟವಾಗಿಲ್ಲ.
(ಏಜನ್ಸೀಸ್)











Click it and Unblock the Notifications