ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಮ್ ನಾಯಕ ಲಾರಾ ನಿವೃತ್ತಿ
ಕಿಂಗ್‌ಸ್ಟನ್ : ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಬ್ರಿಯಾನ್ ಲಾರಾ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶನಿವಾರ ವಿದಾಯ ಹೇಳಲಿದ್ದಾರೆ.
ಈ ಬಗ್ಗೆ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಏಕದಿನ ಮತ್ತು ಟೆಸ್ಟ್ ಪಂದ್ಯ ಸೇರಿದಂತೆ ಎಲ್ಲಾ ರೀತಿಯ ಪಂದ್ಯಗಳಿಂದಲೂ ದೂರ ಉಳಿಯುತ್ತೇನೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಶನಿವಾರದ ಪಂದ್ಯವೇ, ನನ್ನ ಪಾಲಿಗೆ ಕಡೆಯ ಪಂದ್ಯವಾಗಲಿದೆ ಎಂದರು.
17ವರ್ಷಗಳ ಕ್ರಿಕೆಟ್ ಜೀವನಕ್ಕೆ ತೆರೆ ಎಳೆಯುತ್ತಿರುವುದರಿಂದ ನನ್ನ ಮನಸ್ಸಿಗೆ ಮತ್ತು ಅಭಿಮಾನಿಗಳಿಗೆ ನೋವಾಗಿದೆ. ಆದರೆ ಇದು ಅನಿವಾರ್ಯ. ಎಲ್ಲಕ್ಕೂ ಒಂದು ಅಂತ್ಯವಿರುತ್ತದೆ ಎಂದು ಎಡಗೈ ಬ್ಯಾಡ್ಸ್‌ಮನ್ ಲಾರಾ ಹೇಳಿದ್ದಾರೆ.
131 ಟೆಸ್ಟ್ ಪಂದ್ಯದಲ್ಲಿ 11.953 ರನ್, ಏಕದಿನ ಪಂದ್ಯಗಳಲ್ಲಿ 10.387 ರನ್ ಗಳಿಸಿ ಅವರು ದಾಖಲೆ ನಿರ್ಮಿಸಿದ್ದರು. 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು 400ರನ್ ಗಳಿಸಿ ಹೊಸ ಇತಿಹಾಸ ಸೃಷ್ಟಿಸಿದ್ದರು.
(ಏಜನ್ಸೀಸ್)












Click it and Unblock the Notifications