ಮಂಗಳೂರು ಸೇರಿದಂತೆ 10 ನಗರಗಳಿಗೆ ಬಿಪಿಓ ಲಗ್ಗೆ

ಬೆಂಗಳೂರು: ಮಂಗಳೂರು ಸೇರಿದಂತೆ ಕೊಚ್ಚಿನ್‌ಹಾಗೂ ನಾಗಪುರ ದಂತಹ ಮಧ್ಯಮ ಗಾತ್ರದ ಪಟ್ಟಣಗಳತ್ತ ಐಟಿ/ಬಿಪಿಓ ಕಂಪೆನಿಗಳು ಮುಖ ಮಾಡಲಿವೆ ಎಂದು ಬಿಪಿಓ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಬೆಂಗಳೂರು, ಮುಂಬಯಿ ಹಾಗೂ ದೆಹಲಿಯತ್ತ ಐಟಿ ಕಂಪೆನಿಗಳು ಸಾಗುತ್ತಿದ್ದ ವು. ಈ ಗ ಪರಿಸ್ಥಿತಿ ಬದಲಾಗಲಿದೆ. ಅಹಮದಾಬಾದ್‌, ನಾಗಪುರ, ಪುನಾ, ಚೆನ್ನೈ, ಹೈದರಾಬಾದ್‌, ಕೊಚ್ಚಿನ್‌, ಕೋಲ್ಕತ್ತಾ, ಮಂಗಳೂರು, ತಿರುವನಂತಪುರ ಹಾಗೂ ವಿಶಾಖಪಟ್ಟಣಗಳು ಐಟಿ ಕಂಪೆನಿಗಳ ಟಾಪ್‌ ಟೆನ್‌ ಪಟ್ಟಿಯಲ್ಲಿ ಸೇರಲಿದೆ.

ಇವುಗಳಲ್ಲಿ ಚೈನ್ನೈ , ಹೈದರಾಬಾದ್‌ ಬಿಟ್ಟರೆ ಉಳಿದ ನಗರಗಳು ಐಟಿ ಉದ್ಯಮಗಳ ಹೊಸ ತಾಣವಾಗಿದೆ. ಕೋಲ್ಕತ್ತಾ, ತಿರುವನಂತಪುರದಂಥ ಕಮ್ಯೂನಿಸ್ಟ್‌ ಪ್ರಾಬಲ್ಯ ನಗರಗಳಿಗೆ ಬಹು ರಾಷ್ಟ್ರೀಯ ಕಂಪೆನಿಗಳ ಪ್ರವೇಶ ಐಟಿ ವಲಯದ ಹಲವರಲ್ಲಿ ಅಚ್ಚರಿ ಮೂಡಿಸಿದೆ. ಜಾಗತೀಕರಣ ಹಾಗೂ ಉದಾರೀಕರಣ ನೀತಿಗೆ ಕಮ್ಯೂನಿಸ್ಟ್‌ ಪ್ರಾಬಲ್ಯದ ಸರ್ಕಾರಗಳು ಒಗ್ಗಿಕೊಳ್ಳತೊಡಗಿರುವುದು ಅವಶ್ಯಕತೆಯೋ , ಅನಿವಾರ್ಯತೆಯೋ ತಿಳಿಯದಾಗಿದೆ.

ಈ ನಗರಗಳತ್ತ ತಿರುಗಿರುವ ಐಟಿ ಕಂಪೆನಿಗಳಲ್ಲಿ ಹೆಚ್‌. ಪಿ ,ಒರಾಕಲ್‌ ಕಂಪೆನಿಗಳು ಮಂಚೂಣಿಯಲ್ಲಿವೆ. ನಗರಗಳಲ್ಲಿನ ಮೂಲಭೂತ ಸೌಕರ್ಯ, ಜನಸಂಖ್ಯೆ, ಶಿಕ್ಷಣ ವ್ಯವಸ್ಥೆ ,ಮಾನವ ಸಂಪನ್ಮೂಲ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೇಲ್ಕಂಡ ನಗರಗಳನ್ನು ಆರಿಸಲಾಗಿದೆ.

ಭಾರತದಲ್ಲಿ ಬಿಪಿಓ ಉದ್ಯಮ ಹಿಂದಿಗಿಂತ ಶೇ. 40 ರ ಪ್ರಗತಿ ಹೊಂದಿದ್ದು, ಅಮೆರಿಕದ ಉದ್ಯೋಗಿಗಳಿಗಿಂತ ಇಲ್ಲಿನ ಉದ್ಯೋಗಿಗಳು ಶೇ. 25 ರ ಕಡಿಮೆ ದರದಲ್ಲಿ ಕೆಲಸ ಮಾಡುವುದರಿಂದ, ಅಮೆರಿಕದ ಬಿಪಿಓ ಕಂಪೆನಿಗಳು ಚೀನಾ ಮುಂತಾದ ದೇಶಗಳ ಕಡೆಗೆ ಹೋಗದೆ ಭಾರತದಲ್ಲಿ ತನ್ನ ಕಂಪೆನಿ ವಿಸ್ತರಣಾ ಕಾರ್ಯದಲ್ಲಿ ತೊಡಗಿವೆ ಎನ್ನಲಾಗುತ್ತಿದೆ.

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+