ಮುಸ್ಲಿಂ-ಕ್ರಿಶ್ಚಿಯನ್ನರಿಗೆ ತಮಿಳುನಾಡಿನಲ್ಲಿ ಸ್ಪೆಷಲ್‌ ಕೋಟಾ

ಚೆೆನ್ನೈ : ಒಬಿಸಿ ವರ್ಗಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಮೀಸಲಾತಿ, ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗೆ ತಮಿಳು ನಾಡು ಸರ್ಕಾರ ಮೀಸಲಾತಿ ಕಲ್ಪಿಸುವುದಾಗಿ ಘೋಷಿಸಿದೆ. ಆ ಮೂಲಕ ಹೊಸ ವಿವಾದಕ್ಕೆ ದಾರಿ ಮಾಡಿದೆ.

ಗುರುವಾರ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಎಂ.ಕರುಣಾನಿಧಿ, ಸರ್ಕಾರಿ ಸೇವೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗೆ ಸರ್ಕಾರ ವಿಶೇಷ ಕೋಟಾವನ್ನು ನಿಗದಿ ಪಡಿಸಲಿದೆ ಎಂಬ ಸಂಗತಿಯನ್ನು ಪ್ರಕಟಿಸಿದರು.

ಈ ವರ್ಗಗಳ ಬಹುದಿನದ ಒತ್ತಾಯಕ್ಕೆ ಸ್ಪಂದಿಸಿ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸುಗಳನ್ವಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮೀಸಲಾತಿ ಕೋಟಾವನ್ನು ಅನುಷ್ಠಾನಗೊಳಿಸಲು, ಅಗತ್ಯ ಕಾನೂನು ಸಿದ್ಧತೆಗಳನ್ನು ಸರ್ಕಾರ ಮಾಡಿಕೊಳ್ಳಲಿದೆ ಎಂದು ಕರುಣಾನಿಧಿ ಹೇಳಿದರು.

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+