ಪರ್ಸನಲ್ ಕೇರ್ ಮಾರುಕಟ್ಟೆಗೆ ಕಾಮಸೂತ್ರದ ಎಂಟ್ರಿ
ಬೆಂಗಳೂರು : ಕಾಮಸೂತ್ರ ಡಿಯೋಡೋರಂಟ್ಸ್ ಬಿಡುಗಡೆಗೊಳಿಸುವ ಮೂಲಕ, ದೇಶದ ಪ್ರತಿಷ್ಠಿತ ಕಾಂಡೋಮ್ ತಯಾರಿಕಾ ಸಂಸ್ಥೆ ಕಾಮಸೂತ್ರ, ಪರ್ಸನಲ್ ಕೇರ್ ಮಾರುಕಟ್ಟೆ ಪ್ರವೇಶಿಸಿದೆ.
ಸ್ತ್ರೀ-ಪುರುಷರಿಗಾಗಿ ತಯಾರಾಗಿರುವ ಕಾಮಸೂತ್ರ ಡಿಯೋಡೋರಂಟ್, ದೇಶಾದ್ಯಂತ ಒಂದು ಲಕ್ಷ ಮಳಿಗೆಗಳಲ್ಲಿ ಮಾರಾಟವಾಗಲಿವೆ. ಪುರುಷರಿಗಾಗಿ ಡಿಯೋಡೋರಂಟ್ಸ್, ಆಫ್ಟರ್‌ಶೇವ್ ಸೇರಿದಂತೆ ಮೂರು ಬಗೆ ಉತ್ಪನ್ನಗಳನ್ನು, ಸ್ತ್ರೀಯರಿಗಾಗಿ ಎರಡು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ.
ಮೊದಲ ವರ್ಷದಲ್ಲಿ ಹೊಸ ಉತ್ಪಾದನೆಗಳಿಂದ 15ಕೋಟಿ ರೂಪಾಯಿ ವಹಿವಾಟು ನಿರೀಕ್ಷಿಸಲಾಗಿದೆ. ಪ್ರತಿವರ್ಷ 100 ಮಿಲಿಯನ್‌ಗಿಂತಲೂ ಹೆಚ್ಚು ಕಾಮಸೂತ್ರ ಕಾಂಡೋಮ್‌ಗಳನ್ನು ಮಾರಾಟ ಮಾಡುವ ಮೂಲಕ, ಸಂಸ್ಥೆ ಮಾರುಕಟ್ಟೆಯಲ್ಲಿ ಶೇಕಡಾ 16ರಷ್ಟು ಪಾಲು ಪಡೆದುಕೊಂಡಿದೆ.
(ಯುಎನ್‌ಐ)












Click it and Unblock the Notifications