ಸುನೀಲ್‌ ಗವಾಸ್ಕರ್‌ ಓಕೆ; ವಿದೇಶಿ ಕೋಚ್‌ ಬೇಡ -ಕಪಿಲ್‌

Gavaskar tops the race for indian cricket coachಮುಂಬೈ : ಟೀಮ್‌ ಇಂಡಿಯಾ ಕೋಚ್‌ ಸ್ಥಾನಕ್ಕೆ ಸುನೀಲ್‌ ಗವಾಸ್ಕರ್‌ ಅವರನ್ನು ನೇಮಕ ಮಾಡಬೇಕೆಂದು ಮಾಜಿ ಕ್ರಿಕೆಟ್‌ ನಾಯಕ ಕಪಿಲ್‌ದೇವ್‌ ಗುರುವಾರ ಒತ್ತಾಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಗ್ರೇಗ್‌ ಚಾಪೆಲ್‌ ರಾಜೀನಾಮೆಯಿಂದ ತೆರವಾಗಿರುವ ಸ್ಥಾನ ತುಂಬಲು ಗವಾಸ್ಕರ್‌ ಅರ್ಹರು. ಇದು ನನ್ನ ವೈಯಕ್ತಿಕ ವಿಶ್ವಾಸ ಮಾತ್ರವಲ್ಲ, ಕ್ರಿಕೆಟ್‌ ಅಭಿಮಾನಿಗಳೂ ಸಹಾ ಗವಾಸ್ಕರ್‌ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದರು.

ನಾನು ಕ್ರಿಕೆಟ್‌ ಆಡುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಸಲ ಗವಾಸ್ಕರ್‌ ಅವರ ಮಾರ್ಗದರ್ಶನ ಪಡೆದಿದ್ದೇನೆ. ಟೀಮ್‌ ಇಂಡಿಯಾವನ್ನು ಗವಾಸ್ಕರ್‌ ಸಮರ್ಥವಾಗಿ ಮುನ್ನಡೆಸಬಲ್ಲರು. ಈ ಸಲ ವಿದೇಶಿ ಕೋಚ್‌ ಬೇಡವೇ ಬೇಡ ಎಂದು ಕಪಿಲ್‌ ಹೇಳಿದರು.

ವಿಶ್ವಕಪ್‌ ಪಂದ್ಯಾವಳಿಯಲ್ಲಿ ಟೀಮ್‌ ಇಂಡಿಯಾ ಕಳಪೆ ಆಟ ಪ್ರದರ್ಶಿಸಿದ್ದು, ಸೋಲಿನ ಕಾರಣ ಹುಡುಕಲು ಶುಕ್ರವಾರದಿಂದ ಎರಡು ದಿನಗಳ ಕಾಲ ಮಹತ್ವದ ಸಭೆ ನಡೆಯಲಿದೆ. ಹೊಸ ಕೋಚ್‌ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಅಂದ ಹಾಗೆ, 1999ರಿಂದ ಆ.2000ದವರೆಗೆ ಕಪಿಲ್‌, ಟೀಮ್‌ ಇಂಡಿಯಾದ ಕೋಚ್‌ ಆಗಿ ಕೆಲಸ ಮಾಡಿದ್ದ ಸಂಗತಿ ಇಲ್ಲಿ ಸ್ಮರಣೀಯ.

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+