ವೋಲ್ವೊದಿಂದ ದಿನಕ್ಕೆ 1ಲಕ್ಷ ರೂಪಾಯಿ ನಷ್ಟ : ಬಿಎಂಟಿಸಿ
ಬೆಂಗಳೂರು : ದೈನಂದಿನ ಮತ್ತು ಮಾಸಿಕ ಪಾಸ್ ಮಾರಾಟದ ಮೂಲಕ ಖುಷಿಯಲ್ಲಿರುವ ಬಿಎಂಟಿಸಿ ಪಾಲಿಗೆ, ವೋಲ್ವೋ ಬಸ್‌ಗಳು ಬಿಳಿ ಆನೆಗಳು! ಅವುಗಳನ್ನು ಸಾಕಲು, ಸಂಸ್ಥೆ ಪರದಾಡುತ್ತಿದೆ.
ವೋಲ್ವೋ ಬಸ್‌ಗಳು ನಗರದ 10ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಅವುಗಳಿಂದ ಸಂಸ್ಥೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಪ್ರತಿದಿನ 97,000 ನಷ್ಟ ಉಂಟಾಗುತ್ತಿದೆ ಎಂಬ ವಿಚಾರವನ್ನು ಸಾರಿಗೆ ಸಚಿವ ಎನ್.ಚೆಲುವರಾಯಸ್ವಾಮಿ, ವಿಧಾನ ಮಂಡಲದಲ್ಲಿ ಹೇಳಿದ್ದಾರೆ.
ಪ್ರಸ್ತುತ ಬಿಎಂಟಿಸಿಯ 48ವೋಲ್ವೋ ಬಸ್‌ಗಳು ಸಂಚರಿಸುತ್ತಿವೆ. ನಷ್ಟದಿಂದಾಗಿ ನಗರದ ವಿವಿಧೆಡೆಗೆ ಇನ್ನಷ್ಟು ವೋಲ್ವೋ ಬಸ್ ಸೇವೆ ವಿಸ್ತರಿಸಬೇಕೆಂಬ ನಿರ್ಧಾರದಿಂದ ಸಂಸ್ಥೆ ಹೊರಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ವೋಲ್ವೋ ಕಾಣದೇ ಹೋದರೂ ಅಚ್ಚರಿಯೇನಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications