ಖಾದಿ ಪ್ರಿಯರೇ, ಮಲ್ಲೇಶ್ವರಂ ಮೈದಾನಕ್ಕೊಮ್ಮೆ ಬನ್ನಿ!
ಬೆಂಗಳೂರು : ನಗರದ ಮಲ್ಲೇಶ್ವರಂ ಮೈದಾನದಲ್ಲಿ ಶನಿವಾರ(ಜ.27)ದಿಂದ ಒಂದು ತಿಂಗಳ ಕಾಲ ಖಾದಿ ಸಂಭ್ರಮ. ಖಾದಿ ಪ್ರಿಯರು ತಮ್ಮ ಆಯ್ಕೆಯ ಖಾದಿ ವಸ್ತ್ರಗಳನ್ನು ಖರೀದಿಸಲು ಸುಸಂದರ್ಭ.
ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನವನ್ನು ಏರ್ಪಡಿಸಿದೆ. ಅಲ್ಲದೇ ಮಾರಾಟ ವ್ಯವಸ್ಥೆಯೂ ಇದೆ. ಈ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈದಾನದಲ್ಲಿ ನಡೆಯಲಿವೆ.
ಸುಮಾರು 320ಮಳಿಗೆಗಳು ಗ್ರಾಹಕರ ಅಗತ್ಯಗಳನ್ನು ಪೂರೈಸಲಿವೆ. ಈ ವರ್ಷ 11ಕೋಟಿ ವ್ಯಾಪಾರ ವಹಿವಾಟನ್ನು ನಿರೀಕ್ಷಿಸಲಾಗಿದೆ ಎಂದು ರಾಜ್ಯ ಖಾದಿ ಆಯೋಗದ ನಿರ್ದೇಶಕ ಮೋಹನ್ ರಾಜು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications