ಬೆಂಗಳೂರಲ್ಲಿ 400 ಕೋಟಿಯ ಹೋಟೆಲ್ ನಿರ್ಮಾಣ!
ಬೆಂಗಳೂರು : ಬೆಂಗಳೂರಿನ ನಿತೀಶ್ ಎಸ್ಟೇಟ್ ಸಂಸ್ಥೆ ಹಾಗೂ ನ್ಯೂಯಾರ್ಕ್‌ನ ಇನ್‌ವೆಸ್ಟರ್ ಸಂಸ್ಥೆ ಜಂಟಿಯಾಗಿ 400 ಕೋಟಿ ರೂ. ವೆಚ್ಚದ ಐಷಾರಾಮಿ ಹೋಟೆಲ್ ನಿರ್ಮಾಣಕ್ಕೆ ಮುಂದಾಗಿವೆ.
ನಗರದ ರೆಸಿಡೆನ್ಸಿ ರಸ್ತೆಯಲ್ಲಿ ನಿರ್ಮಾಣವಾಗಲಿರುವ ಈ ಹೋಟೆಲ್, ಅತ್ಯಾಧುನಿಕ ಸೌಲಭ್ಯುವುಳ್ಳ ಸುಮಾರು 250 ಕೊಠಡಿಗಳನ್ನು ಹೊಂದಿರುತ್ತದೆ ಎಂದು ಸಿಟಿ ಗ್ರೂಪ್ಸ್‌ನ ಮುಖ್ಯಸ್ಥ ಡೇವಿಡ್ ಷೇಫರ್ ತಿಳಿಸಿದರು.
ಹೋಟೆಲ್‌ನ ನಿರ್ಮಾಣ ಕಾರ್ಯ ಸುಮಾರು 30 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಡೇವಿಡ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications