ವೃತ್ತಿಪರ ಕೋರ್ಸ್‌ ಪುಸ್ತಕಕ್ಕೆ ಇನ್ನು ಪರದಾಡಬೇಕಿಲ್ಲ!

ಬೆಂಗಳೂರು : ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಇನ್ನು ಮುಂದೆ ಕಾಲೇಜಿನ ಲೈಬ್ರರಿಯಲ್ಲಿ ಪುಸ್ತಕಕ್ಕಾಗಿ ಹುಡುಕಬೇಕಿಲ್ಲ. ಎಂ.ವಿ. ಬುಕ್‌ ಬ್ಯಾಂಕ್‌ನಿಂದ ಪುಸ್ತಕ ಪಡೆದು ಸೆಮಿಸ್ಟ ರ್‌ ಪೂರ್ತಿ ಅರಾಮವಾಗಿ ಓದಬಹುದು.

ಕಾಲೇಜಿನ ಲೈಬ್ರರಿಯಲ್ಲಿ ಒಂದು ವಿಷಯದ ಮೇಲೆ 4-5 ಪುಸ್ತಕಗಳಿರುತ್ತದೆ. ಅದನ್ನು ಪಡೆಯಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಜೊತೆಗೆ ಹೆಚ್ಚೆಂದರೆ ವಾರ ಅಥವಾ 15 ದಿನ ಮಾತ್ರ ತಮ್ಮ ಬಳಿ ಪುಸ್ತಕ ಇಟ್ಟುಕೊಳ್ಳಬಹುದು. ಈ ಸಮಸ್ಯೆಗೆ ಸೂಕ್ತ ಪರಿಹಾರ ರೂಪವಾಗಿ ಬುಕ್‌ ಬ್ಯಾಂಕ್‌ ಪ್ರಾದೇಶಿಕ ಖಾತೆಯನ್ನು ನಗರದಲ್ಲಿ ತೆರೆಯಲಾಗಿದೆ.

ಇಂಜಿನೀಯರಿಂಗ್‌, ಮೆಡಿಕಲ್‌ ಅಲ್ಲದೆ ಎಂಬಿಎ, ಐಟಿ ಸೇರಿದಂತೆ ಸಾವಿರಾರು ಪುಸ್ತಕಗಳು ನಮ್ಮಲ್ಲಿವೆ. ಪುಸ್ತಕ ಪಡೆದವರು ಒಂದು ಪೂರ್ತಿ ಸೆಮಿಸ್ಟರ್‌ವರೆಗೂ ಇಟ್ಟುಕೊಳ್ಳಬಹುದು. ವಿದ್ಯಾರ್ಥಿಗಳು ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಮರಿಯಪ್ಪನ್‌ ಕೋರಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 4165 8797

ಅಂತರ್ಜಾಲ ತಾಣವನ್ನು ವೀಕ್ಷಿಸಿ: www.mvbookbank.org.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+