ಲೈಂಗಿಕ ಜಾಹೀರಾತು: ಎಎಕ್ಸ್‌ಎನ್ ಮೇಲೆ ನಿರ್ಬಂಧ!
ನವದೆಹಲಿ : ಅಶ್ಲೀಲ ಕಾರ್ಯಕ್ರಮಗಳ ಪ್ರಸಾರ ಮಾಡಿದ ವಿದೇಶಿ ಟೀವಿ ಚಾನೆಲ್ ಎಎಕ್ಸ್‌ಎನ್ ಪ್ರಸಾರವನ್ನು ಎರಡು ತಿಂಗಳ ಕಾಲ ತಡೆಹಿಡಿಯಲಾಗಿದೆ.
ಈ ಸಂಬಂಧ ವಾರ್ತಾ ಮತ್ತು ಪ್ರಚಾರ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ. ಚಾನೆಲ್‌ನ ಸಿಗ್ನಲ್‌ಗಳನ್ನು ನಿರ್ಬಂಧಿಸಿ, ರಾಷ್ಟ್ರದೆಲ್ಲೆಡೆ ಪ್ರಸಾರ ಸ್ಥಗಿತಗೊಳಿಸಬೇಕೆಂದು ಸಚಿವಾಲಯ ತಿಳಿಸಿದೆ.
ಲೈಂಗಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಚಾನೆಲ್‌ಗಳಿಗೆ ಸಚಿವಾಲಯ ಎಚ್ಚರಿಕೆ ನೀಡಿತ್ತು. ಕೆಲ ದಿನಗಳ ಹಿಂದೆ ಲೈಂಗಿಕ ಜಾಹೀರಾತುಗಳನ್ನು ಎಕ್ಸ್‌ಎನ್ ಪ್ರಸಾರ ಮಾಡಿದೆ. ಹೀಗಾಗಿ ಮಾ.15ರವರೆಗೆ ನಿರ್ಬಂಧವನ್ನು ಹೇರಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
(ಯುಎನ್‌ಐ)












Click it and Unblock the Notifications