3 ತಿಂಗಳಲ್ಲಿ ಇನ್ಫೋಸಿಸ್ ಲಾಭ 983 ಕೋಟಿ ರೂಪಾಯಿ!
ಬೆಂಗಳೂರು : ಮೂರನೇ ತ್ರೆೃಮಾಸಿಕ ಅವಧಿ(2006ರ ಅಕ್ಟೋಬರ್- ಡಿಸೆಂಬರ್)ಯಲ್ಲಿ ಸಾಫ್ಟ್‌ವೇರ್ ದಿಗ್ಗಜ ಇನ್ಫೋಸಿಸ್ ಕಂಪೆನಿ, 983 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್‌ನ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ನಂದನ್ ಎಂ. ನಿಲೇಕಣಿ ಮಾಹಿತಿ ನೀಡಿದ್ದು, ಆದಾಯದಲ್ಲಿ ಶೇಕಡಾ 51.5ರಷ್ಟು ಬೆಳವಣಿಗೆಯಾಗಿದೆ ಎಂದರು.
ಕಂಪೆನಿಯ ಆದಾಯ 3,655 ಕೋಟಿ ರೂ.ಗಳು. ಕಂಪೆನಿ ಗಮನಾರ್ಹ ಹೆಜ್ಜೆಗಳನ್ನು ಹಾಕುತ್ತಿದ್ದು, ನೇಮಕಾತಿ ಪ್ರಕ್ರಿಯೆಯೂ ಮುಂದುವರೆದಿವೆ. ಪ್ರಸ್ತುತ ಕಂಪೆನಿಯ ಉದ್ಯೋಗಿಗಳ ಸಂಖ್ಯೆ 69,432 ಎಂದು ತಿಳಿಸಿದರು.
ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಸ್. ಗೋಪಾಲಕೃಷ್ಣನ್, ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್, ಇನ್ಫೋಸಿಸ್ ಬಿಪಿಓ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್ ಪೈ ಮತ್ತಿತರರು ಹಾಜರಿದ್ದರು.
(ಇನ್ಫೋ ವಾರ್ತೆ)












Click it and Unblock the Notifications