ಬೀದಿ ನಾಯಿಗಳ ದಾಳಿಯಿಂದ ಇನ್ನೊಂದು ಮಗು ಪಾರು!
ಬೆಂಗಳೂರು : ಸಾರ್ವಜನಿಕರು ಸಕಾಲಕ್ಕೆ ಸಹಾಯಕ್ಕೆ ಓಡಿ ಬರುವುದು ತಡವಾಗಿದ್ದರೇ, ಈ ವೇಳೆಗೆ ನಗರದ ಇನ್ನೊಂದು ಮಗು ಬೀದಿ ನಾಯಿಗಳಿಗೆ ಬಲಿಯಾಗುತ್ತಿತ್ತು.
ಚಂದ್ರಲೇಔಟ್‌ನಲ್ಲಿ ಇತ್ತೀಚೆಗಷ್ಟೇ ನಾಯಿಗಳ ದಾಳಿಯಿಂದ ಪುಟ್ಟ ಮಗುವೊಂದು ಬಲಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ, ಇದೇ ಬಡಾವಣೆಯಲ್ಲಿ ಗೌರಮ್ಮ(7) ಎನ್ನುವ ಪುಟ್ಟ ಬಾಲಕಿ ಮೇಲೆ ನಾಯಿಗಳು ಎರಗಿದ ಘಟನೆ ವರದಿಯಾಗಿದೆ.
ತನ್ನ ಮನೆ ಮುಂದೆ ನಿಂತಿದ್ದ ಗೌರಮ್ಮಳ ಮೇಲೆ, ಮೂರು ಬೀದಿ ನಾಯಿಗಳು ದಾಳಿ ಮಾಡಿವೆ. ಆಗ ಕೆಳಕ್ಕೆ ಬಿದ್ದ ಮಗುವನ್ನು ನಾಯಿಯಾಂದು ಬಾಯಲ್ಲಿ ಕಚ್ಚಿಕೊಂಡು ಎಳೆದೊಯ್ಯುತ್ತಿತ್ತು. ಆಷ್ಟರಲ್ಲಿ ಸಾರ್ವಜನಿಕರು ಕಲ್ಲು ತೂರಿ, ನಾಯಿಗಳನ್ನು ಓಡಿಸಿದರು. ಇದರಿಂದ ಬಾಲಕಿ ತಲೆಗೆ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಬಾಲಕಿ ಚೇತರಿಸಿಕೊಂಡಿದ್ದಾಳೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications