ಸಂಕ್ರಾಂತಿ ಪ್ರಯುಕ್ತ ‘ಏರ್ ಡೆಕ್ಕನ್’ ವಿಶೇಷ ಕೊಡುಗೆ!?
ಬೆಂಗಳೂರು : ಕಡಿಮೆ ವೆಚ್ಚದಲ್ಲಿ ವಿಮಾನ ಯಾನ ಕಲ್ಪಿಸುವುದಾಗಿ ಹೇಳುವ ಏರ್ ಡೆಕ್ಕನ್ ಸಂಸ್ಥೆ, ಹೊಸ ಯೋಜನೆಯನ್ನು ಮಕರ ಸಂಕ್ರಾಂತಿ ಪ್ರಯುಕ್ತ ಪ್ರಕಟಿಸಿದೆ.
ಏಳು ರೂಪಾಯಿ(ತೆರಿಗೆಗಳು ಪ್ರತ್ಯೇಕ) ಮುಖ ಬೆಲೆಯ ಮೂರು ಲಕ್ಷ ಟಿಕೆಟ್‌ಗಳನ್ನು ಶುಕ್ರವಾರ ಸಂಸ್ಥೆ ಬಿಡುಗಡೆ ಮಾಡಿದೆ. ಈ ಯೋಜನೆಯಿಂದ ಫೆಬ್ರವರಿ ಮತ್ತು ಮಾರ್ಚಿ ತಿಂಗಳಲ್ಲಿ ವಿಮಾನ ಯಾನ ಮಾಡಬಹುದು. ಜ.14ರಿಂದ ಬುಕ್ಕಿಂಗ್ ಆರಂಭಗೊಳ್ಳಲಿದೆ.
ಜನಸಾಮಾನ್ಯರಿಗೂ ವಿಮಾನ ಯಾನ ಸಾಧ್ಯವಾಗಲಿ ಎಂಬ ಉದ್ದೇಶದಿಂದ ಸಂಸ್ಥೆ ಯೋಜನೆಗಳನ್ನು ರೂಪಿಸುತ್ತಿದೆ. ಭಾರತದಲ್ಲಿ ವ್ಯಾಪಕವಾಗಿ ಏರ್ ಡೆಕ್ಕನ್ ಬೇರೂರುತ್ತಿದೆ. ಪ್ರತಿದಿನ 300 ವಿಮಾನಗಳ ಹಾರಾಟ ಸೇವೆ ಲಭ್ಯವಿದ್ದು, ಸಂಸ್ಥೆ 60ವಿಮಾನ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸಿದೆ ಎಂದು ಏರ್ ಡೆಕ್ಕನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಸಕ ಜಿ.ಆರ್.ಗೋಪಿನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಯುಎನ್‌ಐ)












Click it and Unblock the Notifications