ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಳಿ; ಹಕ್ಕಿಗಳ ಕಲರವ..ಬನ್ನಿ ರಂಗನತಿಟ್ಟೆಂಬ ಪಕ್ಷಿಕಾಶಿಗೆ!

By Staff
|
Google Oneindia Kannada News

ಮೈಸೂರು : ರಂಗನತಿಟ್ಟು ಪಕ್ಷಿಧಾಮದಲ್ಲಿ ಹಕ್ಕಿಗಳ ಕಲರವ ಕೇಳಿಬರುತ್ತಿದೆ. ದೂರದೂರಿನ ಅತಿಥಿಗಳು, ಅರ್ಥಾತ್‌ ವಿದೇಶಿ ಹಕ್ಕಿಗಳು ಇಲ್ಲಿಗೆ ಗುಂಪುಗುಂಪಾಗಿ ಆಗಮಿಸುತ್ತಿವೆ.

ಸುಮಾರು 5000ಕ್ಕೂ ಅಧಿಕ ಪ್ರಬೇಧದ ಹಕ್ಕಿಗಳು ಇಲ್ಲಿಗೆ ಆಗಮಿಸುತ್ತವೆ ಎಂದು ನಿರೀಕ್ಷಿಸಲಾಗಿದ್ದು, ಜನವರಿ ಎರಡನೇ ವಾರದವರೆಗೂ ಹಕ್ಕಿಗಳು ಬರುತ್ತಲೇ ಇರುತ್ತವೆ. ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್‌ ಮೊದಲ ವಾರ ಅವು ತವರಿಗೆ ಮರಳುತ್ತವೆ.

ಕಾವೇರಿ ದಂಡೆಯಲ್ಲಿರು ರಂಗನತಿಟ್ಟಿಗೆ ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದಿಂದ ಸ್ಪೂನ್‌ಬಿಲ್‌, ಯುಎಸ್‌ನಿಂದ ಓಪನ್‌ ಬಿಲ್ಡ್‌ ಸ್ಟಾರ್ಕ್‌, ರಷ್ಯಾದಿಂದ ಸ್ನೇಕ್‌ ಬರ್ಥ್‌, ಸೈಬೀರಿಯಾದಿಂದ ಪೆಯಿಂಟೆಡ್‌ ಸ್ಟಾರ್ಕ್‌, ಗ್ರೇಟ್‌ ಸ್ಟೋನ್‌ ಸಿಲ್ವರ್‌, ಸಿಲ್ವರ್‌ ಟರ್ನ್‌ ಸೇರಿದಂತೆ ನಾನಾ ಪಕ್ಷಿಗಳು ಬರುತ್ತವೆ.

ಸುಮಾರು 60ಎಕರೆಯ ಈ ಪಕ್ಷಿಧಾಮದಲ್ಲಿ ದೋಣಿ ವಿಹಾರವಿದೆ. 2005-06ರಲ್ಲಿ 1.65,000 ಮಂದಿ ಪ್ರವಾಸಿಗರು ಆಗಮಿಸಿದ್ದರು. ಈ ವರ್ಷ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

ವಿಶ್ವದ ವಿವಿಧ ಭಾಗಗಳಿಂದ ಆಗಮಿಸುವ ಹಕ್ಕಿಗಳು, ಸುಮಾರು ಒಂದು ತಿಂಗಳ ಕಾಲ ಇಲ್ಲಿ ನೆಲೆಸಲಿವೆ. ಇಲ್ಲಿ ಗೂಡುಕಟ್ಟಿ, ಸಂತಾನೋತ್ಪತ್ತಿ ನಂತರ, ತಮ್ಮ ಮರಿಹಕ್ಕಿಗಳೊಂದಿಗೆ ತವರಿಗೆ ಮರಳುವುದು ಪ್ರತಿವರ್ಷವೂ ನಡೆದು ಬಂದಿರುವ ಸಂಪ್ರದಾಯ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X