ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹೆಂಡತಿಯ ವ್ಯಭಿಚಾರಕ್ಕೆ ಶಿಕ್ಷೆ ಯಾಕೆ?’ - ಒಂದು ಪ್ರಶ್ನೆ

By Staff
|
Google Oneindia Kannada News

ನವದೆಹಲಿ : ಅಕ್ರಮ ಸಂಬಂಧ ಹೊಂದುವ ಅಥವಾ ವ್ಯಭಿಚಾರ ನಡೆಸುವ ಮಹಿಳೆಗೆ ಶಿಕ್ಷೆ ವಿಧಿಸುವುದು ಬೇಡ ಎಂದಿರುವ ರಾಷ್ಟ್ರೀಯ ಮಹಿಳಾ ಆಯೋಗ, ಈ ಸಂಬಂಧದ ಕಾನೂನು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದೆ.

ಇಂತಹ ಪ್ರಕರಣಗಳಲ್ಲಿ ಮಹಿಳೆಯನ್ನು ಬಲಿಪಶು ಎಂಬಂತೆ ನೋಡಬೇಕು. ವೈವಾಹಿಕ ಬದುಕಿನಲ್ಲಿ ಹೆಂಡತಿ ವ್ಯಭಿಚಾರ ಮಾಡಿದರೆ, ಕ್ರಿಮಿನಲ್‌ ಅಪರಾಧವೆಂದು ಪರಿಗಣಿಸುವುದು ಸಲ್ಲದು. 497ನೇ ವಿಧಿಗೆ ತಿದ್ದುಪಡಿ ಬೇಕಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಅಭಿಪ್ರಾಯಪಟ್ಟಿದೆ.

ಹಿನ್ನೆಲೆ : ಸದ್ಯದ ಕಾನೂನಿನ ಪ್ರಕಾರ, ಹೆಂಡತಿಯ ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಕಾನೂನುಗಳಿಲ್ಲ. ಹೀಗಾಗಿ ಮಹಿಳೆಯರು ನಿರಾತಂಕವಾಗಿ ಅಡ್ಡದಾರಿ ಹಿಡುಯುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಹೀಗಾಗಿ ದಂಡ ಸಂಹಿತೆಯ 497ನೇ ವಿಧಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕೇಂದ್ರ ಚಿಂತನೆ ನಡೆಸಿತ್ತು. ಈ ಕುರಿತು ಕೇಂದ್ರ ಸರ್ಕಾರ, ಮಹಿಳಾ ಆಯೋಗದ ಸಲಹೆಯನ್ನು ಕೋರಿತ್ತು. ಆಯೋಗ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದೆ.

ಈ ವಿಚಾರಕ್ಕೆ ನಿಮ್ಮ ಸಮ್ಮತಿ ಇದೆಯಾ?

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X