2007ರಿಂದ ಕಾರು ಮತ್ತು ಬೈಕುಗಳ ಬೆಲೆಯಲ್ಲಿ ಹೆಚ್ಚಳ!
ನವದೆಹಲಿ : ಹೊಸ ವರ್ಷದ ಆರಂಭದಿಂದ ಬೈಕು ಮತ್ತು ಕಾರುಗಳ ದರ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೀಗಾಗಿ, ಕಾರು ಅಥವಾ ಬೈಕು ಖರೀದಿಸುವ ಮನಸುಳ್ಳವರು, ಈಗಲೇ ಖರೀದಿಸುವುದು ಉತ್ತಮ.
ಮಾರುತಿ ಕಾರುಗಳ ಬೆಲೆಯಲ್ಲಿ 12ಸಾವಿರ, ಹುಂಡೈ ವಾಹನಗಳ ಬೆಲೆಯಲ್ಲಿ ಶೇ.2ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೀರೋ ಹೊಂಡ ಮತ್ತು ಬಜಾಜ್ ಕಂಪನಿಗಳ ದ್ವಿಚಕ್ರ ವಾಹನಗಳ ದರದಲ್ಲಿ 500ರಿಂದ 1000 ರೂ. ತನಕ ಹೆಚ್ಚಳವಾಗಲಿದೆ ಎನ್ನಲಾಗಿದೆ.
2007ರ ಜನವರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿವೆ. ಲಾಭಾಂಶದಲ್ಲಿ ಭಾರಿ ಕುಸಿತ ಉಂಟಾಗಿರುವುದರಿಂದ, ದರ ಹೆಚ್ಚಳ ಅನಿವಾರ್ಯ ಎಂದು ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಹೇಳಿವೆ.
(ಏಜನ್ಸೀಸ್)












Click it and Unblock the Notifications