‘ವೆಬ್‌ಸೈಟ್’ ಪ್ರೇಮ ಕತೆ ದುರಂತದಲ್ಲಿ ಅಂತ್ಯವಾಯಿತು!
ಬೆಂಗಳೂರು : ಇದು ಪ್ರೇಮಕತೆಯೋ, ದುರಂತಕತೆಯೋ ನೀವೇ ಹೇಳಿ. ಮಧ್ಯವಯಸ್ಕರಿಬ್ಬರ ಪ್ರೇಮ, ದುರಂತದಲ್ಲಿ ಅಂತ್ಯಗೊಂಡಿದೆ.
ಈ ಸುದ್ದಿಯ ದುರಂತ ನಾಯಕ ಚೆನ್ನೈ ಮೂಲದ ವೆಂಕಟಾಚಲ(57). ದುರಂತ ನಾಯಕಿ; ಬೆಂಗಳೂರಿನ ಜಯನಗರ ನಿವಾಸಿ ಉಷಾ(46). ವೆಂಕಟಾಚಲ ಪತ್ನಿ ಕಳೆದುಕೊಂಡಿದ್ದ ವಿಧುರ. ಇಬ್ಬರು ಮಕ್ಕಳ ತಂದೆ. ಉಷಾ, ಪತಿಯಿಂದ ವಿಚ್ಛೇದನ ಪಡೆದು, ಒಂಟಿ ಬದುಕನ್ನು ಒಪ್ಪಿಕೊಂಡವರು. ಇವರಿಗೂ ಇಬ್ಬರು ಮಕ್ಕಳು.
ಉಷಾ ಮತ್ತು ವೆಂಕಟಾಚಲರನ್ನು ಬೆಸೆದದ್ದು, ಇಂಟರ್‌ನೆಟ್. ಅಂದರೆ ವಿವಾಹ ಸಂಬಂಧಿ ವೆಬ್‌ಸೈಟ್. ವಿಚಾರಗಳ ವಿನಿಮಯ, ಭಾವನೆಗಳ ವಿನಿಮಯದ ನಂತರ, ಇವರಿಬ್ಬರೂ ಮದುವೆಗೆ ಸಿದ್ಧರಾದರು. ಆದರೆ ವಿಧಿಯ ಲೆಕ್ಕಾಚಾರ ಬೇರೆಯೇ ಇತ್ತು.
ಇಂಟರ್‌ನೆಟ್ ಪ್ರೀತಿಗೆ ತೆರೆ ಎಳೆದು, ಮದುವೆಯ ಬಂಧನಕ್ಕೆ ಒಳಗಾಗಲು ಪರಸ್ಪರ ಭೇಟಿಯಾಗಲು ಇವರಿಬ್ಬರು ನಿರ್ಧರಿಸಿದರು. ಪೂರ್ವ ನಿಗದಿಯಂತೆ ಉಷಾರನ್ನು ನೋಡಲು, ವೆಂಕಟಾಚಲ ಉಪ್ಪಾರಪೇಟೆಯ ಹೋಟೆಲ್‌ವೊಂದಕ್ಕೆ ಬೊಗಸೆ ಪ್ರೀತಿಯಾಂದಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಸುದೀರ್ಘ ಮಾತುಕತೆ ನಡೆಯಿತು.
ಎಲ್ಲವೂ ಶುಭಂ ಎನ್ನುವಾಗಲೇ, ಉಷಾ ಕುಸಿದುಬಿದ್ದರು. ವೈದ್ಯರ ವರದಿಗಳ ಪ್ರಕಾರ, ಉಷಾ ಹೃದಯಾಘಾತಕ್ಕೆ ಬಲಿಯಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications