ಶೃಂಗೇರಿ ಬಳಿ ಎನ್‌ಕೌಂಟರ್ : ನಕ್ಸಲ್ ಮುಖಂಡ ಬಲಿ
ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ಸಮೀಪದ ಕೈಗಾ ಅರಣ್ಯದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ, ನಕ್ಸಲ್ ನಾಯಕನೊಬ್ಬ ಬಲಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಂಗಳವಾರ ಖಚಿತಪಡಿಸಿವೆ.
ಸೋಮವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ, ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ಮೇಲೆ ಗುಂಡು ಹಾರಿಸಿದ. ಪಡೆ ಪ್ರತಿದಾಳಿ ಮಾಡಿದಾಗ, ಗುಂಡಿಗೆ ಬಲಿಯಾದ. ಮಹಿಳೆಯೂ ಸೇರಿದಂತೆ ಮೂವರು ನಕ್ಸಲ್‌ರನ್ನು ಬಂಧಿಸಲು ಮುಂದಾದಾಗ, ಈ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಇನ್ನಿತರ ನಕ್ಸಲರು ಪರಾರಿಯಾಗಿದ್ದಾರೆ.
ಸಾಯುವ ಮುನ್ನ ನಕ್ಸಲ್ ನಾಯಕನೆಂದು ಗೌಡ ಹೇಳಿದ್ದು, ಈ ಭಾಗದಲ್ಲಿ ಚಟುವಟಿಕೆಗಳ ನಡೆಸುತ್ತಿದ್ದುದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಕಳೆದ ತಿಂಗಳಷ್ಟೆ ಉಡುಪಿ ಸಮೀಪದ ಶಂಕರನಾರಾಯಣ ಅರಣ್ಯ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆ ಸಂದರ್ಭದಲ್ಲಿ ನಕ್ಸಲರು ಪರಾರಿಯಾಗಿದ್ದ ಸಂಗತಿ ಇಲ್ಲಿ ಉಲ್ಲೇಖನೀಯ.
(ಯುಎನ್‌ಐ)












Click it and Unblock the Notifications