ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಭೀಕರ ಕೊಲೆ
ಮೈಸೂರು : ನಗರದ ಹೊರವಲಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಭೀಕರ ಕೊಲೆ ಮಂಗಳವಾರ ನಡೆದಿದೆ. ಈ ಭಾಗದಲ್ಲೀಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಚಂದ್ರಶೆಟ್ಟಿ(32) ಎಂದು ಗುರ್ತಿಸಲಾಗಿದ್ದು, ಈತನ ರುಂಡ-ಮುಂಡಗಳು ಸಂಪೂರ್ಣವಾಗಿ ಬೇರ್ಪಟ್ಟಿವೆ.
ಮೈಸೂರಿನ ಇನ್ಫೋಸಿಸ್ ಸಂಸ್ಥೆಯ ಹಂಗಾಮಿ ನೌಕರನಾಗಿದ್ದ ಈತ, ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. ಜೆಡಿಎಸ್ ಪಕ್ಷದವರೇ ಚಂದ್ರು ಕೊಲೆಗೆ ಕಾರಣ ಎಂದು ಆತನ ಕುಟುಂಬ ದೂರಿದೆ. ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.
(ಏಜನ್ಸೀಸ್)












Click it and Unblock the Notifications