ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಠೀರವ ಕ್ರೀಡಾಂಗಣದಲ್ಲಿ ಚಿಣ್ಣರ ಹಬ್ಬ, ಅಬ್ಬಬ್ಬಾ!

By Staff
|
Google Oneindia Kannada News

ಬೆಂಗಳೂರು : ರಾಜಧಾನಿ ನಗರದಲ್ಲಿ ದಿನಕ್ಕೊಂದು ಹಬ್ಬ. ಈಗ ಚಿಣ್ಣರ ಹಬ್ಬ. ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಚಿಣ್ಣರ ಹಬ್ಬ ಆರಂಭಗೊಂಡಿದ್ದು, ಡಿ.17ರವರೆಗೆ ನಡೆಯಲಿದೆ.

ಈವೆಂಟ್ಸ್‌ ಪ್ರೊ ಸಂಸ್ಥೆ, ಕೆನರಾ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ಹಬ್ಬವನ್ನು ಸಂಘಟಿಸಿದೆ. ಮಕ್ಕಳಿಗಂತೂ ಸುಗ್ಗಿಯೋ ಸುಗ್ಗಿ. ಮಕ್ಕಳ ನೆಪದಲ್ಲಿ ಮಕ್ಕಳಾಗಲು ದೊಡ್ಡವರಿಗೂ ಒಳ್ಳೆ ಅವಕಾಶ. ಆಟಿಕೆಗಳು, ಮಕ್ಕಳ ಸೆಳೆವ ಪುಸ್ತಕಗಳು, ಬೆರಗುಟ್ಟಿಸುವ ಸಿ.ಡಿ.ಗಳು, ನೋಟ್‌ ಪುಸ್ತಕ, ಅಂದದ ಪೆನ್ನುಗಳು ಹೀಗೆ ಮಕ್ಕಳಿಗೆ ಏನೇನು ಬೇಕೋ ಎಲ್ಲವೂ ಅಲ್ಲಿವೆ. ಸುಮಾರು80ಮಳಿಗೆಗಳು ಮಕ್ಕಳಿಂದು ತುಂಬಿತುಳುಕುತ್ತಿವೆ.

ಇಷ್ಟು ಮಾತ್ರವಲ್ಲ ಸಾಕಷ್ಟು ಆಟಗಳನ್ನು ಇಲ್ಲಿ ಆಡಲು ಅವಕಾಶವಿದೆ. ದಿನಕ್ಕೊಂದು ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಉಂಟು. ಗುರುವಾರವಷ್ಟೇ ಕಿರಿಯ ನಿರ್ದೇಶಕ ಮಾಸ್ಟರ್‌ ಕಿಶನ್‌ ಚಿಣ್ಣರ ಹಬ್ಬವನ್ನು ಉದ್ಘಾಟಿಸಿದ್ದಾರೆ.

ಬೆಳಗ್ಗೆ 10ರಿಂದ ರಾತ್ರಿ 8.30ರ ತನಕ ಹಬ್ಬದ ಸಂಭ್ರಮ. ಮಕ್ಕಳಿಗೆ 20ರೂಪಾಯಿ, ದೊಡ್ಡವರಿಗೆ 30ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X