2 ರೂಪಾಯಿಗೆ ವಿಮಾನ ಯಾನ : ಏರ್ ಡೆಕ್ಕನ್ ಆಹ್ವಾನ
ಬೆಂಗಳೂರು : ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಏರ್ ಡೆಕ್ಕನ್ ಸಂಸ್ಥೆ, ಅಗ್ಗದ ಪ್ರಯಾಣ ದರ ಯೋಜನೆಯನ್ನು ಶುಕ್ರವಾರ ಪ್ರಕಟಿಸಿದೆ. ಯೋಜನೆ ಪ್ರಕಾರ ಎರಡು ರೂಪಾಯಿ(ತೆರಿಗೆಗಳು ಪ್ರತ್ಯೇಕ)ಗಳಿಗೆ ವಿಮಾನದ ಟಿಕೆಟ್‌ಗಳು ಲಭ್ಯ.
2007ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪ್ರಯಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಡಿ.17ರಿಂದ ಟಿಕೆಟ್‌ಗಳ ಬುಕ್ಕಿಂಗ್ ಆರಂಭಗೊಳ್ಳಲಿದೆ. ಭಾರತೀಯ ಪ್ರಯಾಣಿಕರನ್ನು ಬಸ್ ಮತ್ತು ರೈಲಿನ ಪ್ರಯಾಣದಿಂದ ವಿಮಾನಯಾನದತ್ತ ಆಕರ್ಷಿಸುವುದು ಯೋಜನೆಯ ಪ್ರಮುಖ ಗುರಿ. ಹೊಸ ವರ್ಷದ ಈ ಪ್ರಯೋಜನವನ್ನು ಗ್ರಾಹಕರು ಬಳಸಿಕೊಳ್ಳಬೇಕು ಎಂದು ಏರ್ ಡೆಕ್ಕನ್ ತಿಳಿಸಿದೆ.
ಇತ್ತೀಚೆಗಷ್ಟೇ 35 ಹೊಸ ವಿಮಾನಗಳ ಸೇವೆಯನ್ನು ಆರಂಭಿಸಲಾಗಿದೆ. ಗೋವಾ, ಹಂಪಿ, ಜೈಪುರಗಳಿಗೆ ಸೇವೆ ಲಭ್ಯವಿದೆ ಎಂದು ಸಂಸ್ಥೆ ಹೇಳಿದೆ.
(ಯುಎನ್‌ಐ)












Click it and Unblock the Notifications