ಇಂಗ್ಲಿಷ್ ಕಿರಿಕಿರಿಯಿಂದ ಅನಿತಾ ನೇಣಿಗೆ ಶರಣಾದರೆ?!
ಬೆಂಗಳೂರು : ಎಲೆಕ್ಟ್ರಾನಿಕ್ಸ್ ಬಿಇ ಪದವೀಧರೆ, ನವವಿವಾಹಿತೆ ಅನಿತಾ(25)ರ ಸಂಶಯಾಸ್ಪದ ಸಾವಿನ ಬಗೆಗೆ, ಪೊಲೀಸರು ಶುಕ್ರವಾರ ತನಿಖೆ ಮುಂದುವರೆಸಿದ್ದಾರೆ.
‘ನನ್ನ ಪತ್ನಿಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ಈ ಕೀಳರಿಮೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದು’ ಎಂದು ಅನಿತಾ ಪತಿ ನಾಗರಾಜು ಪೊಲೀಸರಿಗೆ ತಿಳಿಸಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನಾಗರಾಜು, ಕಳೆದ ನಾಲ್ಕು ತಿಂಗಳ ಹಿಂದಷ್ಟೆ, ಆಂಧ್ರ ಮೂಲದವರಾದ ಅನಿತಾರನ್ನು ಮದುವೆಯಾಗಿದ್ದರು.
ಮೊನ್ನೆ ರಾತ್ರಿ ಅನಿತಾಗೆ ವಾಂತಿ ಆಯಿತು. ವಾಂತಿ ಮಾಡಿಕೊಳ್ಳಲು ಬಚ್ಚಲಿಗೆ ಹೋದವಳು ಮತ್ತೆ ವಾಪಸ್ ಬರಲಿಲ್ಲ. ಅನುಮಾನದಿಂದ ಕೊಠಡಿಗೆ ಹೋಗಿ ನೋಡಿದರೆ, ನೇಣು ಹಾಕಿಕೊಂಡಿದ್ದಳು ಎಂದು ನಾಗರಾಜು ಹೇಳಿದ್ದಾರೆ. ಸುಬ್ರಹ್ಮಣ್ಯ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications