ಬೆಳಗಾವಿಯ ಎಸ್‌ಬಿಐ ಬ್ರಾಂಚ್‌ನಲ್ಲಿ 12 ಲಕ್ಷ ದರೋಡೆ
ಬೆಳಗಾವಿ : ಏಳು ಮಂದಿ ದರೋಡೆಕೋರದ ತಂಡ ಸುಮಾರು 10ರಿಂದ 12ಲಕ್ಷ ರೂಪಾಯಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಾಣಿ ಚನ್ನಮ್ಮ ನಗರದ ಬ್ರಾಂಚ್‌ನಲ್ಲಿ ಶುಕ್ರವಾರ ಲೂಟಿ ಮಾಡಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ನಿಂಬಾಳ್ಕರ್ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಗ್ರಾಹಕರಂತೆ ಈ ದರೋಡೆಕೋರರು ಬ್ಯಾಂಕ್‌ನೊಳಕ್ಕೆ ಬಂದರು. ಬಲವಂತದಿಂದ ಬ್ಯಾಂಕ್ ವ್ಯವಸ್ಥಾಪಕರ ಕೋಣೆಗೆ ನುಗ್ಗಿದರು. ವ್ಯವಸ್ಥಾಪಕರಿಗೆ ರಿವಲ್ವಾರ್ ತೋರಿಸಿ ಬೆದರಿಸಿ, ಹಣವನ್ನು ದೋಚಿದ್ದಾರೆ. ನಂತರ ಪರಾರಿಯಾಗಿದ್ದಾರೆ ಎಂದು ನಿಂಬಾಳ್ಕರ್ ಹೇಳಿದ್ದಾರೆ.
ದರೋಡೆಕೋರರು 25ರಿಂದ 35ವರ್ಷದೊಳಗಿನವರು ಎನ್ನಲಾಗಿದೆ. ಶ್ವಾನದಳ, ಬೆರಳಚ್ಚು ತಜ್ಞರು ಶೋಧನಾ ಕಾರ್ಯವನ್ನು ನಡೆಸುತ್ತಿದ್ದಾರೆ.
(ಯುಎನ್‌ಐ)












Click it and Unblock the Notifications