ಕೊಟ್ನಿಸ್ ಕುಟುಂಬ ಸದಸ್ಯರ ಭೇಟಿ ಮಾಡಿದ ಜಿಂಟಾವೋ
ಮುಂಬಯಿ : ಚೀನಾ-ಜಪಾನ್ ಯುದ್ಧ ಸಂದರ್ಭದಲ್ಲಿ ವೈದ್ಯಕೀಯ ನಿಯೋಗದ ಸದಸ್ಯರಾಗಿದ್ದ ಭಾರತೀಯ ವೈದ್ಯ ದ್ವಾರಕಾನಾಥ್ ಕೊಟ್ನಿಸ್ ಕುಟುಂಬ ಸದಸ್ಯರನ್ನು, ಭಾರತ ಬೇಟಿಯಲ್ಲಿರುವ ಚೀನಾ ಪ್ರಧಾನಿ ಹು ಜಿಂಟಾವೋ ಗುರುವಾರ ಭೇಟಿ ಮಾಡಿದರು.
ನಗರದ ತಾಜ್‌ಮಹಲ್ ಹೋಟಲ್‌ನಲ್ಲಿ, ಕೊಟ್ನಿಸ್ ಸೋದರಿಯರಾದ ವತ್ಸಲಾ ಕೊಟ್ನಿಸ್, ಮನೋರಮಾ ಕೊಟ್ನಿಸ್ ಸೇರಿದಂತೆ ಕುಟುಂಬದ ಏಳು ಜನ ಸದಸ್ಯರು ಭೇಟಿಯಾದರು.
ಭೇಟಿ ಸಂದರ್ಭದಲ್ಲಿ, ಜಿಂಟಾವೋ ದ್ವಾರಕಾನಾಥ್ ಕೊಟ್ನಿಸ್ ಅವರಿಗೆ ಅನಂತ ಶ್ರದ್ಧಾಂಜಲಿ ಸಲ್ಲಿಸಿ, ‘ಅವರು ಯಾವತ್ತೂ ಭಾರತ ಮತ್ತು ಚೀನಾ ಮಧ್ಯೆ ಸೇತುವೆಯಾಗಿರುತ್ತಾರೆ’ ಎಂದು ಹೇಳಿದರು.
ಕೊಟ್ನಿಸ್ ಕುಟುಂಬ ಜಿಂಟಾವೋ ಅವರಿಗೆ, ‘ಕೊಟ್ನಿಸ್ ಜೀವನ ಚರಿತ್ರೆ’ (ಅವರ ಸೋದರ ಮಂಗೇಶ್ ಕೊಟ್ನಿಸ್ ಬರೆದದ್ದು), ‘ಡಾ.ಕೊಟ್ನಿಸ್ ಕೀ ಅಮರ್ ಕಹಾನಿ’ ಎಂಬ ಚಲನಚಿತ್ರ ಸಿಡಿ, ಹಾಗೂ ಸೊಲ್ಲಾಪುರ(ಕೊಟ್ನಿಸ್ ಮೂಲಸ್ಥಳ)ದ ಕೈಮಗ್ಗದಲ್ಲಿ ನೇಯ್ದ ಬೆಡ್‌ಶೀಟ್ ಕಾಣಿಕೆ ನೀಡಿತು.
ಜಿಂಟಾವೋ, ಡಾ.ಕೊಟ್ನಿಸ್ ಚೀನಾದಲ್ಲಿದ್ದಾಗಿನ ಕೆಲವು ಅಪರೂಪದ ಭಾವಚಿತ್ರಗಳನ್ನು ಅವರ ಕುಟುಂಬಕ್ಕೆ ನೀಡಿದರು.
ಕೊಟ್ನಿಸ್ ಯಾರು...? : 1938ರ ಚೀನಾ-ಜಪಾನ್ ಯುದ್ಧ ಸಂದರ್ಭದಲ್ಲಿ ಮಹಾರಾಷ್ಟ್ರದ ಡಾ.ಕೊಟ್ನಿಸ್ ವೈದ್ಯಕೀಯ ನಿಯೋಗದ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು. 1942ರಲ್ಲಿ ಅವರು ಚೀನಾದಲ್ಲೇ ಕೊನೆಯುಸಿರೆಳೆದದ್ದನ್ನು ಇಲ್ಲಿ ಸ್ಮರಿಸಬಹುದು.
(ಯುಎನ್‌ಐ)












Click it and Unblock the Notifications