‘ಯಾಕೋ ಮಿಲಿಟರಿ ರಮ್ ಸಹಾ ಕಿಕ್ ಕೊಡ್ತಾಯಿಲ್ಲ...’
ಬೆಂಗಳೂರು : ಸಿಪಾಯಿಗಳು ತವರಿಗೆ ಬಂದಾಗ, ಅವರನ್ನು ಮುತ್ತಿಕೊಳ್ಳುವ ಗೆಳೆಯರ ಬಳಗ ಮೊದಲು ಕೇಳೋದು, ‘ತಂದ್ಯಾ ಅದನ್ನಾ?’. ‘ಅದನ್ನಾ’ ಅಂದರೆ ಮಿಲಿಟರಿ ರಮ್ಮು! ದುರಂತ ಅಂದ್ರೆ, ಮಿಲಿಟರಿ ರಮ್ಮು ಸಹಾ ಈಗ ಅಸಲಿಯಾಗಿ ಉಳಿದಿಲ್ಲ! ಹೀಗಾಗಿ ಕಿಕ್ ನೀಡುವ ಸಾಧ್ಯತೆಗಳು ಕಡಿಮೆ!!
ಹೌದು, ಇಂತಹ ಒಂದು ಸಂಗತಿ ಇತ್ತೀಚೆಗೆ ಬಯಲಾಗಿದೆ. ಟ್ರಿಬಲ್ ಎಕ್ಸ್ ರಮ್, ಹವಾಯಿಯನ್ ವೈಟ್ ರಮ್, ಲಾರ್ಡ್ ನೆಲ್ಸನ್, ಬ್ಲಾಕ್ ಕ್ಯಾಟ್ ಸೇರಿದಂತೆ ವಿವಿಧ ರಮ್‌ಗಳ ನಕಲಿ ತಯಾರಿಕೆಯನ್ನು ರಾಜ್ಯ ಅಬಕಾರಿ ಇಲಾಖೆ ಪತ್ತೆ ಮಾಡಿದೆ.
ನಗರದ ಮದ್ಯದಂಗಡಿಗಳಲ್ಲಿ ಮಿಲಿಟರಿ ಮದ್ಯ ಕಂಡು ಬೆರಗಾಗಿದ್ದ ಕುಡುಕರು, ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಅಸಲಿ ಮಿಲಿಟರಿ ಮದ್ಯವನ್ನು ಹೋಲುವಂತೆ, ನಕಲಿ ಸರಕುಗಳು ಮಾರುಕಟ್ಟೆಯಲ್ಲಿವೆ. 750 ಮಿ.ಲೀ.ನ ಮಿಲಿಟರಿ ನಕಲಿ ಮದ್ಯದ ಬಾಟಲಿ ಮಾರುವ ಮೂಲಕ, ಮದ್ಯದಂಗಡಿಗಳು 200ರೂಪಾಯಿ ಲಾಭವನ್ನು ಕಿಸೆಗೆ ಹಾಕಿಕೊಳ್ಳುತ್ತಿವೆ.
ಇನ್ನಾದರೂ ಹುಷಾರಾಗಿ... ಕುಡಿಯೋದು ಕುಡಿಯುವರಿ.. ಅಸಲಿ ಸರಕನ್ನು ಕುಡಿಯಿರಿ... ಹೊಟ್ಟೆ ಚೆನ್ನಾಗಿರಲಿ...
(ಏಜನ್ಸೀಸ್)












Click it and Unblock the Notifications