ಹೆಲ್ಮೆಟ್ ಮಾರಾಟದ ಹಗಲುದರೋಡೆ : ದೂರು ನೀಡಿ
ಬೆಂಗಳೂರು : ಸರ್ಕಾರದ ಹೆಲ್ಮೆಟ್ ನಿಯಮ, ವ್ಯಾಪಾರಿಗಳಿಗೆ ವರವಾಗಿ ಪರಿಣಮಿಸಿದೆ. ಹೆಲ್ಮೆಟ್ ಮಾರಾಟಕ್ಕೆ ಸಂಬಂಧಿಸಿದಂತೆ ವ್ಯಾಪಾರಿಗಳು ಸಾರ್ವಜನಿಕರನ್ನು ವಂಚಿಸುತ್ತಿರುವ ಸಂಗತಿಗಳು ಕಂಡು ಬಂದಿವೆ.
ಹೆಲ್ಮೆಟ್‌ಗಳನ್ನು ಕಳಪೆ ಮತ್ತು ಅತ್ಯಧಿಕ ಬೆಲೆಗೆ ಮಾರಾಟ ಮಾಡುತ್ತಿರುವವರ ಬಗ್ಗೆ ಕಾನೂನು ಮಾಪನ ಶಾಸ್ತ್ರ ಇಲಾಖೆ ಗಮನ ಹರಿಸಿದೆ. ಈ ಸಂಬಂಧ ನಗರದ ಲಾಲ್‌ಬಾಗ್ ರಸ್ತೆ, ಜೆ.ಸಿ.ರಸ್ತೆ, ಹೊಸೂರು ರಸ್ತೆಗಳಲ್ಲಿನ ಹೆಲ್ಮೆಟ್ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆದಿದ್ದು, 72 ಪ್ರಕರಣಗಳು ದಾಖಲಾಗಿವೆ.
ಹೆಲ್ಮೆಟ್ ಮಾರಾಟದಲ್ಲಿನ ವಂಚನೆ ಅರಿವಿಗೆ ಬಂದರೆ, ಎಂ.ಆರ್.ಪಿ.ಗಿಂತಲೂ ಅಧಿಕ ಬೆಲೆ ಕೇಳಿದರೆ ಸಾರ್ವಜನಿಕರು ದೂರು ನೀಡಬಹುದು. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 22269148, 22260554. ಇ-ವಿಳಾಸ ; [email protected]
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications