ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪು ಸೇರಿದಂತೆ ಮುವತ್ತಾರು ಗಣ್ಯರಿಗೆ ಏಕೀಕರಣ ಪ್ರಶಸ್ತಿ

By Staff
|
Google Oneindia Kannada News

Patil Puttappa and S.R. Bommai are amongst 36 Ekikarana Award winnersಬೆಂಗಳೂರು : ಪತ್ರಕರ್ತ ಡಾ। ಪಾಟೀಲ ಪುಟ್ಟಪ್ಪ, ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ, ಸಾಹಿತಿ ವ್ಯಾಸರಾಯ ಬಲ್ಲಾಳ, ಕಯ್ಯಾರ ಕಿಞ್ಞಣ್ಣ ರೈ ಸೇರಿದಂತೆ 36ಗಣ್ಯರಿಗೆ ಮತ್ತು ನಾಲ್ಕು ಸಂಸ್ಥೆಗಳಿಗೆ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನವೆಂಬರ್‌ 1ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸುವರ್ಣ ಕರ್ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಗೃಹ ಸಚಿವ ಎಂ.ಪಿ.ಪ್ರಕಾಶ್‌ ನೇತೃತ್ವದ ಆಯ್ಕೆ ಸಮಿತಿ ಗಣ್ಯರನ್ನು ಆಯ್ಕೆ ಮಾಡಿದೆ.

ಆಯ್ಕೆ ಪಟ್ಟಿ ಪ್ರಕಟಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪ್ರಶಸ್ತಿಗಳ ಸಂಖ್ಯೆ 50ತಲುಪುವ ಸಾಧ್ಯತೆಗಳಿವೆ ಎಂಬ ಸುಳಿವು ನೀಡಿದ್ದಾರೆ.

ಪ್ರಶಸ್ತಿ ಪುರಸ್ಕೃತರು :

  1. ಹಿರಿಯ ಪತ್ರಕರ್ತ ಡಾ। ಪಾಟೀಲ ಪುಟ್ಟಪ್ಪ (ಹುಬ್ಬಳ್ಳಿ)
  2. ಸ್ವಾತಂತ್ರ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ (ಬೆಂಗಳೂರು)
  3. ಸಾಹಿತಿ ಕಯ್ಯಾರ ಕಿಞ್ಞಣ್ಣ ರೈ (ಕಾಸರಗೋಡು)
  4. ಮಾಜಿ ಸಂಸದ ಹಳಬಂಡಿ ಶಿವಮೂರ್ತಿ ಶಾಸ್ತ್ರಿ (ಕೊಪ್ಪಳ)
  5. ಮಾಜಿ ಶಾಸಕ ಸರ್ದಾರ್‌ ಶರಣಗೌಡ ಇನಾಂದಾರ್‌ (ಗುಲ್ಬರ್ಗ)
  6. ಸಾಹಿತಿ ವ್ಯಾಸರಾಯ ಬಲ್ಲಾಳ (ಬೆಂಗಳೂರು)
  7. ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ (ಬೆಂಗಳೂರು)
  8. ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ (ಹುಬ್ಬಳ್ಳಿ)
  9. ನಿವೃತ್ತ ನ್ಯಾಯಮೂರ್ತಿ ಕೋ.ಚನ್ನಬಸಪ್ಪ (ಬೆಂಗಳೂರು)
  10. ಮಾಜಿ ಸಚಿವ ವಿಶ್ವನಾಥ ರೆಡ್ಡಿ ಮುದ್ನಾಳ್‌ (ಗುಲ್ಬರ್ಗ)
  11. ಮಾಜಿ ಸಚಿವ ಭೀಮಣ್ಣ ಖಂಡ್ರೆ (ಬೀದರ್‌)
  12. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಎಂ. ಇದಿನಬ್ಬ (ಮಂಗಳೂರು)
  13. ಬಿ.ವಿ. ಕಕ್ಕಿಲ್ಲಾಯ (ಕಾಸರಗೋಡು)
  14. ಮಾಜಿ ಮೇಯರ್‌ ಜಿ.ನಾರಾಯಣ (ಬೆಂಗಳೂರು)
  15. ಅಬ್ಬಿಗೇರಿ ವಿರೂಪಾಕ್ಷಪ್ಪ ಸೂಡಿ (ಗದಗ)
  16. ಮುದೇನೂರು ಸಂಗಣ್ಣ ಚಿಗಟೇರಿ (ದಾವಣಗೆರೆ)
  17. ಪೆರ್ಲ ಕೃಷ್ಣ ಭಟ್‌(ಕಾಸರಗೋಡು)
  18. ಶಿವಮೂರ್ತಯ್ಯ ಸೂರೇಬಾನ (ನರಗುಂದ)
  19. ಅನ್ನದಾನಯ್ಯ ಪುರಾಣಿಕ್‌ (ಬೆಂಗಳೂರು)
  20. ಇಬ್ರಾಹಿಂ ಸಾಹೇಬ್‌ ಹೊರೇಹಾಳ (ಶಿವಮೊಗ್ಗ)
  21. ಮಾಜಿ ಸಚಿವ ಕೆ.ಎಚ್‌.ರಂಗನಾಥ್‌ (ಬೆಂಗಳೂರು)
  22. ಕೆ.ಟಿ. ಸ್ವಾಮಿ (ಚಳ್ಳಕೆರೆ)
  23. ಬಿ.ಎಂ. ಬಸವರಾಜಯ್ಯ (ಸೋಮವಾರ ಪೇಟೆ)
  24. ನಿವೃತ್ತ ನ್ಯಾಯಮೂರ್ತಿ ಬಸವರಾಜು ಕುರುಗೋಡು (ಬಳ್ಳಾರಿ)
  25. ಪಂಚಾಕ್ಷರಿ ಬಾಳಸಂಗದ (ಹಾವೇರಿ)
  26. ಡಾ। ಅ.ನಂಜಪ್ಪ (ಕೊಟ್ಟೂರು)
  27. ಮಾಜಿ ಸಚಿವ ಎಂ.ಎನ್‌. ಸದ್ಯೋಜಾತಪ್ಪ
  28. ಜಿ.ಎಂ. ರೇವಣಸಿದ್ದಯ್ಯ (ಶಿರಗುಪ್ಪ)
  29. ವಾಸುದೇವಾಚಾರ್ಯ (ಕೂಡ್ಲಿಗಿ)
  30. ಲಿಂಗಮ್ಮ ಅಣ್ಣಾ ಬಸಪ್ಪ ಮರಿಲಿಂಗಣ್ಣ ನವರ್‌ (ಗೋಕಾಕ್‌)
  31. ಮಾಜಿ ಶಾಸಕ ನೀಲಗಂಗಯ್ಯ ಪೂಜಾರ್‌ (ಧಾರವಾಡ)
  32. ಶಿವರುದ್ರಪ್ಪ ಸಿದ್ನಾಳ್‌ (ಬೈಲಹೊಂಗಲ)
  33. ವೀರಯ್ಯಸ್ವಾಮಿ ಶಾಸ್ತ್ರೀಮಠ (ಬೆಂಗಳೂರು)
  34. ಚನ್ನಮ್ಮ ವೇದಮೂರ್ತಿ ಇಟಗಿ (ಹುಬ್ಬಳ್ಳಿ)
  35. ಬೇವಕ್ಕ ರಮಾನಂದ ಮನ್ನಂಗಿ (ಹಾವೇರಿ)
  36. ಪ್ರೊ। ಎಂ. ಎನ್‌. ರಾಜಶೇಖರಯ್ಯ (ಧಾರವಾಡ)
ಪ್ರಶಸ್ತಿ ಪುರಸ್ಕೃತ ಸಂಸ್ಥೆಗಳು :
  1. ಕರ್ನಾಟಕ ವಿದ್ಯಾವರ್ಧಕ ಸಂಘ (ಧಾರವಾಡ)
  2. ಕನ್ನಡ ಸಾಹಿತ್ಯ ಪರಿಷತ್ತು (ಬೆಂಗಳೂರು)
  3. ಕರ್ನಾಟಕ ಸಂಘ (ಶಿವಮೊಗ್ಗ)
  4. ಕರ್ನಾಟಕ ಸಮಿತಿ (ಕಾಸರಗೋಡು)
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X