ಬೆಂಗಳೂರಿನ ಪೋನ್‌ಬೂತ್‌ಗಳಲ್ಲಿನ್ನು ದೃಶ್ಯ ಸಂವಾದ
ಬೆಂಗಳೂರಿನ ಪೋನ್‌ಬೂತ್‌ಗಳಲ್ಲಿನ್ನು ದೃಶ್ಯ ಸಂವಾದ
ಕರೆ ದರ ನಿಮಿಷಕ್ಕೆ ರೂ.3 ಮಾತ್ರ! ವಿ-ದರ್ಪಣ್‌ನಿಂದ ಮತ್ತೊಂದು ಸಂಪರ್ಕ ಕ್ರಾಂತಿ
ನಗರದ ಶಾಸಕರ ಭವನದ ಆವರಣ ಮತ್ತು ಮೈಸೂರಿನಲ್ಲಿ ಈ ವಿನೂತನ ‘ವಿ-ದರ್ಪಣ್’ ಸೇವೆ ಬುಧವಾರ(ಏ.5)ದಿಂದ ಆರಂಭಗೊಳ್ಳಲಿದೆ.
ಇನ್ನು ಹದಿನೈದು ದಿನಗಳಲ್ಲಿ ರಾಜಧಾನಿ ನಗರದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 800ಕ್ಕೂ ಅಧಿಕ ಬೂತ್‌ಗಳು ತಲೆ ಎತ್ತಲಿವೆ. ಈ ಬೂತ್‌ಗಳಲ್ಲಿ ಕರೆ ಮಾಡಿದರೆ ನಿಮಿಷಕ್ಕೆ ಕೇವಲ ಮೂರು ರೂಪಾಯಿ ಪಾವತಿಸಬೇಕಾಗುತ್ತದೆ.
ಕ್ವೆಂಟಿ ಫಸ್ಟ್ ಸೆಂಚುರಿ ಇನ್ಫ್‌ರ್ಮೇಷನ್ ಟೆಕ್ನಾಲಜಿ ಪ್ರೆೃ.ಸಂಸ್ಥೆ ಮತ್ತು ಇಂಗ್ಲೆಂಡ್‌ನ ಇಕಾರಾ ಎಂಟರ್‌ಪ್ರೆೃಸಸ್ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇನ್ನೊಂದು ವರ್ಷದಲ್ಲಿ ಮನೆಗಳಲ್ಲೂ ಈ ಸೇವೆಯನ್ನು ಹೊಂದಬಹುದು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications