ವಿಧಾನಸಭೆಯಲ್ಲಿ ರಾಜ್ಯ ವೃತ್ತಿ ಶಿಕ್ಷಣ ವಿಧೇಯಕ ಮಂಡನೆ

ವಿಧಾನಸಭೆಯಲ್ಲಿ ರಾಜ್ಯ ವೃತ್ತಿ ಶಿಕ್ಷಣ ವಿಧೇಯಕ ಮಂಡನೆ
ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಅವಕಾಶ, ನಿಯಮ ಮೀರಿದರೆ ಲಕ್ಷಗಟ್ಟಲೆ ದಂಡ

ಬೆಂಗಳೂರು : ರಾಜ್ಯ ವೃತ್ತಿ ಶಿಕ್ಷಣ ವಿಧೇಯಕವನ್ನು ಬುಧವಾರ ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.

ಖಾಸಗಿ, ಅನುದಾನರಹಿತ ಅಥವಾ ಯಾವುದೇ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡಲು ವಿಧೇಯಕ ಅವಕಾಶ ಮಾಡಿಕೊಡುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಿ.ಎಚ್‌.ಶಂಕರಮೂರ್ತಿ ಅವರು ತಿಳಿಸಿದರು.

ವಿಧೇಯಕದ ನಿಯಮ ಮೀರಿ ಹೆಚ್ಚಿನ ಶುಲ್ಕ ಸಂಗ್ರಹಿಸುವ ಸಂಸ್ಥೆಗಳಿಂದ 10 ಲಕ್ಷ ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಅಲ್ಲದೆ ದಾಖಲಾತಿ ಸಂದರ್ಭದಲ್ಲಿ ಅವ್ಯವಹಾರ ನಡೆಸಿದರೆ ಅದಕ್ಕೂ 10 ಲಕ್ಷ ರೂಪಾಯಿ ದಂಡ ವಿಧಿಸಬಹುದು ಎಂದು ಅವರು ಹೇಳಿದರು.

ಪ್ರವೇಶ ಮೇಲ್ವಿಚಾರಣ ಸಮಿತಿ ಹಾಗೂ ಶುಲ್ಕ ನಿಯಂತ್ರಣ ಸಮಿತಿ ರಚಿಸಲೂ ವಿಧೇಯಕ ಅವಕಾಶ ಮಾಡಿಕೊಡಲಿದ್ದು, ಇದಕ್ಕೆ ಅಂಗೀಕಾರ ನೀಡಬೇಕು ಎಂದು ಅವರು ಸದಸ್ಯರಲ್ಲಿ ಮನವಿ ಮಾಡಿದರು.

(ಏಜೆನ್ಸೀಸ್‌)

ಮುಖಪುಟ / ಕುಮಾರ ಪರ್ವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+