ಚಂದನದಲ್ಲಿ ಏ.10ರಿಂದ ‘ಸಿಇಟಿ’ಗೆ ಮಾರ್ಗದರ್ಶನ

ಚಂದನದಲ್ಲಿ ಏ.10ರಿಂದ ‘ಸಿಇಟಿ’ಗೆ ಮಾರ್ಗದರ್ಶನ
ವಿದ್ಯಾರ್ಥಿಗಳಿಗೆ ಟೀವಿ ಪಾಠ, ಮೇ.5ರವರೆಗೆ ವಾರದ ಐದು ದಿನ...

ಬೆಂಗಳೂರು : ಪ್ರಸ್ತುತ ವರ್ಷದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಗೆ ವಿದ್ಯಾರ್ಥಿಗಳಿಗೆ ನೆರವಾಗಲು, ದೂರದರ್ಶನದ ಚಂದನ ವಾಹಿನಿ ಮಾರ್ಗದರ್ಶನ ನೀಡಲು ಮುಂದಾಗಿದೆ.

ಏಪ್ರಿಲ್‌ 10ರಿಂದ ಚಂದನ ವಾಹಿನಿಯಲ್ಲಿ ಮಾರ್ಗದರ್ಶನ ಕಾರ್ಯಕ್ರಮ ಪ್ರಸಾರವಾಗಲಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಈ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದು, ಈ ಕುರಿತು ಪ್ರಕಟಣೆ ಹೊರಡಿಸಿದೆ.

ಒಟ್ಟು 60 ಕಂತುಗಳು ಪ್ರಸಾರವಾಗಲಿದ್ದು, ಪ್ರತಿ ಕಂತು 30 ನಿಮಿಷಗಳ ಅವಧಿಯದ್ದಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರದ ತಲಾ 15 ಕಂತುಗಳು ಪ್ರಸಾರವಾಗಲಿವೆ.

ಏಪ್ರಿಲ್‌ 10ರಿಂದ ಮೇ 5ರವರೆಗೆ ಒಟ್ಟು 20ದಿನಗಳ ಕಾಲ ಪ್ರಸಾರವಾಗುವ ಸರಣಿಯಲ್ಲಿ, ವಾರದ ಕಡೆಯ ದಿನಗಳಾದ ಶನಿವಾರ ಹಾಗೂ ಭಾನುವಾರದಂದು ಪ್ರಸಾರ ಇರುವುದಿಲ್ಲ.

ಪ್ರಸಾರದ ಸಮಯ : ಮಧ್ಯಾಹ್ನ 12.00ರಿಂದ 01.30 ಗಂಟೆಯವರೆಗೆ(ಪ್ರತಿದಿನ ಅರ್ಧ ಗಂಟೆಯ ಮೂರು ಕಂತುಗಳು)

ಸಿಇಟಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಏಪ್ರಿಲ್‌ 15ರೊಳಗೆ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ಕೋರಲಾಗಿದೆ.

ವಿಳಾಸ -

ಎಸ್‌.ಎ.ಮೋಹನ್‌ಕುಮಾರ್‌
ಸಂಚಾಲಕರು, ಸಿಇಟಿ ಮಾರ್ಗದರ್ಶನ-2006,
ಪದವಿಪೂರ್ವ ಶಿಕ್ಷಣ ಇಲಾಖೆ,
ಸಂಪಿಗೆ ರಸ್ತೆ,
ಮಲ್ಲೇಶ್ವರಂ 18ನೇ ಅಡ್ಡರಸ್ತೆ,
ಬೆಂಗಳೂರು-560003.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+