ಶಿವಸೇನೆ ವರ್ಸಸ್‌ ಮಹಾರಾಷ್ಟ್ರ ನವನಿರ್ಮಾಣ ಸೇನೆ!

ಶಿವಸೇನೆ ವರ್ಸಸ್‌ ಮಹಾರಾಷ್ಟ್ರ ನವನಿರ್ಮಾಣ ಸೇನೆ!
ರಾಜ್‌ ಠಾಕ್ರೆಯಿಂದ ಹೊಸ ಪಕ್ಷ, ಮಾರ್ಚ್‌ 19ರಂದು ಕಾರ್ಯಕರ್ತರ ರ್ಯಾಲಿ

ಮುಂಬಯಿ : ಶಿವಸೇನಾ ಬಂಡಾಯ ನಾಯಕ ರಾಜ್‌ ಠಾಕ್ರೆ ಗುರುವಾರ ಮಹಾರಾಷ್ಟ್ರ ನವನಿರ್ಮಾಣ ಸೇನಾ ಎಂಬ ಹೊಸ ಪಕ್ಷ ಸ್ಥಾಪಿಸಿದ್ದಾರೆ.

ವೈ.ಬಿ.ಚವಾಣ್‌ ಸಭಾಭವನದಲ್ಲಿ ಕಿಕ್ಕಿರಿದು ನೆರೆದಿದ್ದ ಜನರ ಸಮ್ಮುಖದಲ್ಲಿ ಪಕ್ಷ ಅಧಿಕೃತವಾಗಿ ಆರಂಭವಾಯಿತು. ಪಕ್ಷದ ಹೊಸ ಧ್ವಜ ಕಡು ನೀಲಿ, ಕೇಸರಿ ಹಾಗೂ ಕಡು ಹಸಿರು ಬಣ್ಣಗಳನ್ನು ಒಳಗೊಂಡಿದೆ.

ರಾಜ್‌ ಠಾಕ್ರೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಾರ್ಚ್‌ 19ರಂದು ಶಿವಾಜಿ ಪಾರ್ಕಿನಲ್ಲಿ ಪಕ್ಷದ ಕಾರ್ಯಕರ್ತರ ರ್ಯಾಲಿ ನಡೆಯಲಿದೆ. ಅಂದು ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಲಾಗುವುದು ಎಂದು ವಿವರಿಸಿದರು.

ಹೊಸ ಪಕ್ಷದ ಸ್ಥಾಪನೆ ಮಾಡುವ ಮೂಲಕ ರಾಜ್‌ ಠಾಕ್ರೆ, ಮಹಾರಾಷ್ಟ್ರ ರಾಜಕೀಯ ಚದುರಂಗದಾಟದಲ್ಲಿ ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದಾರೆ. ಈ ಹೊಸ ನಡೆ ಎಷ್ಟು ಫಲಪ್ರದವಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ರಾಜ್‌ ಶಿವಸೇನಾ ಪಕ್ಷದ ಹುದ್ದೆಯಿಂದ ನವೆಂಬರ್‌ 27ಕ್ಕೆ ರಾಜೀನಾಮೆ ನೀಡಿ, ಡಿಸೆಂಬರ್‌ 27ಕ್ಕೆ ಪಕ್ಷಕ್ಕೆ ವಿದಾಯ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+