• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಲಿಕಾನ್‌ ಬೀಚ್‌ ನಿರ್ಮಾಣದ ಗುರಿ : ರೋಬೋಸಾಫ್ಟ್‌

By Super
|

ಬೆಂಗಳೂರು : ಉಡುಪಿಯಲ್ಲಿರುವ ರೋಬೋಸಾಫ್ಟ್‌ ಸಂಸ್ಥೆ ವರ್ಷಾಂತ್ಯದೊಳಗೆ ತನ್ನ ಉದ್ಯೋಗಿಗಳ ಸಂಖ್ಯೆ ದ್ವಿಗುಣಗೊಳಿಸಲಿದ್ದು, ಶೇಕಡಾ 60ರಿಂದ 70ರಷ್ಟು ಬೆಳವಣಿಗೆ ಗುರಿ ಹಾಕಿಕೊಂಡಿದೆ.

ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ರೋಹಿತ್‌ ಭಟ್‌, ಸೋಮವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ವಾರ್ಷಿಕ 12ಕೋಟಿ ರೂಪಾಯಿ ಆದಾಯ ತರುವ ಸಂಸ್ಥೆಯಲ್ಲಿ ಪ್ರಸ್ತುತ 250 ಜನ ಕೆಲಸ ಮಾಡುತ್ತಿದ್ದಾರೆ. ವರ್ಷಾಂತ್ಯದೊಳಗೆ ಉದ್ಯೋಗಿಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ. ಮೇ ತಿಂಗಳಲ್ಲಿ ಸಂಸ್ಥೆ ಸಂತೇಕಟ್ಟೆಯಲ್ಲಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಈ ಹೊಸ ಉದ್ಯೋಗಾವರಣ 1ಲಕ್ಷ ಚದರಡಿ ವಿಸ್ತೀರ್ಣಹೊಂದಿದ್ದು, 800 ಜನ ಸಾಫ್ಟ್‌ವೇರ್‌ ವೃತ್ತಿಪರರಿಗೆ ಸ್ಥಳಾವಕಾಶ ಮಾಡಿಕೊಡಲಿದೆ. ಈ ವಿಸ್ತರಣೆ ಕಾರ್ಯಕ್ಕೆ ಸುಮಾರು 12ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವಿವರಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಸಿಲಿಕಾನ್‌ ಬೀಚಾಗಿ ಪರಿವರ್ತಿಸುವುದು ನಮ್ಮ ಗುರಿ. ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ನ್ಯಾಷನಲ್‌ ಇಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ) ಸೇರಿದಂತೆ ಈ ಎರಡೂ ಜಿಲ್ಲೆಗಳಲ್ಲಿ 16 ಇಂಜಿನೀಯರಿಂಗ್‌ ಕಾಲೇಜುಗಳಿವೆ. ರಾಜ್ಯದಲ್ಲೇ ಅತಿಹೆಚ್ಚು ಸಂಖ್ಯೆಯ ಸಾಕ್ಷರರು ಈ ಜಿಲ್ಲೆಗಳಲ್ಲಿದ್ದಾರೆ. ಈ ಅಮೂಲ್ಯ ಮಾನವ ಸಂಪನ್ಮೂಲವನ್ನು ಸಂಸ್ಥೆ ಬಳಸಿಕೊಳ್ಳಲಿದೆ ಎಂದು ಹೇಳಿದರು.

ಆ್ಯಪಲ್‌, ಯುಮ್ಯಾಕ್ಸ್‌, ಹ್ಯೂಲೆಟ್‌ ಪ್ಯಾಕರ್ಡ್‌, ಕ್ಯಾನನ್‌, ಇನ್‌ಟ್ಯೂಟ್‌ನಂತಹ ಸಂಸ್ಥೆಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ವಿಶ್ವದ ವಿವಿಧೆಡೆಗಳಲ್ಲಿ ನಮ್ಮ ಗ್ರಾಹಕರಿದ್ದಾರೆ ಎಂದು ಸ್ಪಷ್ಟಪಡಿಸಿದರು.(ಯುಎನ್‌ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Udupibased Robosoft is implementing a major expansion plan to double its staff strength of 250 by the yearend and look for a 60 to 70 per cent growth.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more