ಏ.8ರಂದು ಎರಡನೇ ಪೋಪ್‌ಜಾನ್‌ಪಾಲ್ ಅಂತ್ಯಕ್ರಿಯೆ
ಏ.8ರಂದು ಎರಡನೇ ಪೋಪ್‌ಜಾನ್‌ಪಾಲ್ ಅಂತ್ಯಕ್ರಿಯೆ
ವ್ಯಾಟಿಕನ್‌ಗೆ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ನೇತೃತ್ವದ ನಿಯೋಗ
ದೇಶ, ಭಾಷೆ, ಧರ್ಮ ಮತ್ತು ಪಂಥಗಳನ್ನು ಮೀರಿ ಮನ್ನಣೆಗಳಿಸಿದ್ದ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಇನ್ನೂರಕ್ಕೂ ಅಧಿಕ ದೇಶಗಳ ಪ್ರಮುಖರು ಹಾಗೂ ಧಾರ್ಮಿಕ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆಯಿದೆ.
ಅಂತ್ಯ ಸಂಸ್ಕಾರದ ಬೆನ್ನಲ್ಲಿ ಏಪ್ರಿಲ್ ಮಾಸಾಂತ್ಯದಲ್ಲಿ ರೋಮನ್ ಕ್ಯಾಥೋಲಿಕರ ಶೃಂಗಸಭೆ ನಡೆಯುತ್ತಿದ್ದು, ವಿಶೇಷ ಮಹತ್ವವನ್ನು ಪಡೆದಿದೆ. ವಿಶ್ವದ 1.1ಶತಕೋಟಿ ರೋಮನ್ ಕ್ಯಾಥೋಲಿಕ್ ಚರ್ಚ್‌ಗಳ ನೂತನ ಅಧಿಪತಿಯ ಆಯ್ಕೆ ಪ್ರಕ್ರಿಯೆಯಿಂದಾಗಿ ಶೃಂಗಸಭೆ ಎಲ್ಲರ ಗಮನ ಸೆಳೆದಿದೆ. 68ವರ್ಷದ ನಿರೋಲಸ್ ಡಿ ಜೀಸಸ್ ಲೊಪೆನ್ ರೊಡ್ರಿಗಸ್ ಹೆಸರು ಪೋಪ್ ಸ್ಥಾನಕ್ಕೆ ಕೇಳಿ ಬರುತ್ತಿದೆ.
ಭಾರತದ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರ ನೇತೃತ್ವದ ಭಾರತೀಯ ನಿಯೋಗ ವ್ಯಾಟಿಕನ್‌ಗೆ ತೆರಳಿ, ಪೋಪ್ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications