ಏಳು ಮಕ್ಕಳನ್ನು ಹೆತ್ತ ಮಹಾತಾಯಿ ಹೆಸರು ಸಿರಿಶಾ!
ಏಳು ಮಕ್ಕಳನ್ನು ಹೆತ್ತ ಮಹಾತಾಯಿ ಹೆಸರು ಸಿರಿಶಾ!
ಏಳು ಹಸುಳೆಗಳಲ್ಲಿ ಪಾಪ ಒಂದೂ ದಕ್ಕಲಿಲ್ಲ, ಸಿರಿಶಾ ಶೋಕಕ್ಕೆ ಎಲ್ಲಿಯ ಮಿತಿ?
ಬೋರಬಂಡದ ಸಿರಿಶಾ(22) ಎಂಬಾಕೆಯನ್ನು ಘರಿದಾಬಾದ್‌ನ ವಾಸವಿ ಆಸ್ಪತ್ರೆಗೆ ಸೋಮವಾರ ರಾತ್ರಿ ಹೆರಿಗೆಗೆಂದು ದಾಖಲಿಸಲಾಗಿತ್ತು. ಅವಧಿಗೆ ಮುನ್ನವೇ ಆಕೆಗೆ ಹೆರಿಗೆಯಾಗಿದ್ದು, ಎಲ್ಲಾ ಮಕ್ಕಳು ಹುಟ್ಟಿದ ತಕ್ಷಣ ಸಾವನ್ನಪ್ಪಿವೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.
ನಾಲ್ಕು ಹೆಣ್ಣು ಮತ್ತು ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದ ಸಿರಿಶಾ ಆರೋಗ್ಯವಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಮನೆಗೆ ತೆರಳುವರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
(ಪಿಟಿಐ)
Post your views
ಮುಖಪುಟ / ವಾಟ್ಸ್ ಹಾಟ್












Click it and Unblock the Notifications