ಒಂದೇ ಸೂರಿನಡಿ ಗ್ರಾಹಕ ಸೇವೆ: ಬೆಂಗಳೂರು ಒನ್‌

ಒಂದೇ ಸೂರಿನಡಿ ಗ್ರಾಹಕ ಸೇವೆ: ಬೆಂಗಳೂರು ಒನ್‌
200 ಬೆಂಗಳೂರು ಒನ್‌ ಕೇಂದ್ರಗಳಆರಂಭಿಕ್ಕೆ ಚಿಂತನೆ

ಬೆಂಗಳೂರು : ನಗರ ನಿವಾಸಿಗಳಿಗೆ ಪೂರಕವಾಗುವಂತೆ ‘ಬೆಂಗಳೂರು ಒನ್‌’ ಕೇಂದ್ರಗಳು ಶನಿವಾರ ಜೀವ ಪಡೆಯುತ್ತಿವೆ.

ಒಂದೇ ಸೂರಿನಡಿ ವಿವಿಧ ಸೇವೆಗಳ ಕಲ್ಪಿಸುವ ಹದಿನಾಲ್ಕು ಕೇಂದ್ರಗಳು ನಗರದಲ್ಲಿ ಸಾರ್ವಜಿಕರಿಗೆ ನೆರವಾಗಲಿವೆ.

ಈ ಕೇಂದ್ರಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ, ಬಿಎಸ್‌ಎನ್‌ಎಲ್‌, ಮಹಾನಗರ ಪಾಲಿಕೆ, ಪ್ರಾದೇಶಿಕ ಸಾರಿಗೆ ಕಚೇರಿ, ಮುದ್ರಾಂಕ ಮತ್ತು ನೋಂದಣಿ, ಪಾಸ್‌ ಫೋರ್ಟ್‌, ಪೋಲೀಸ್‌ ಇಲಾಖೆಗೆ ಸಂಬಂಧಿಸಿದ ಸೇವೆಗಳನ್ನು ಸದ್ಯಕ್ಕೆ ಪಡೆಯಬಹುದಾಗಿದೆ.

ವಿದ್ಯುತ್‌, ದೂರವಾಣಿ ಬಿಲ್‌ ಕಟ್ಟುವುದಕ್ಕೆ ಈಗ ಪರದಾಡುವಂತಿಲ್ಲ. ರೈಲು ಹಾಗೂ ಬಸ್‌ ಟಿಕೇಟ್‌ಗಳನ್ನು ಕಾಯ್ದಿರಿಸಲು ಸಹಾ ಈ ಕೇಂದ್ರಗಳಲ್ಲಿ ಅವಕಾಶವಿದೆ. ಪ್ರತಿ 2ಕಿ.ಮೀ ವ್ಯಾಪ್ತಿಗೊಂದರಂತೆ ಸುಮಾರು 200ಕೇಂದ್ರಗಳನ್ನು ನಗರದೆಲ್ಲೆಡೆ ಸ್ಥಾಪಿಸುವ ಗುರಿ ಹೊಂದಲಾಗಿದೆ.

ಬೆಂಗಳೂರು ಒನ್‌ ಕೇಂದ್ರಗಳು ಇಲ್ಲಿವೆ :

  • ಜಯನಗರ ಕೇಂದ್ರ -9ನೇ ಕ್ರಾಸ್‌, 9ನೇ ಮೈನ್‌, 2ನೇ ಬ್ಲಾಕ್‌, ಜಯನಗರ
  • ರಾಜಾಜಿ ನಗರ ಕೇಂದ್ರ -ಮಹಾನಗರ ಪಾಲಿಕೆ ಕಾಂಪ್ಲೆಕ್ಸ್‌, 2ನೇ ಬ್ಲಾಕ್‌, ರಾಜಾಜಿ ನಗರ
  • ಮಲ್ಲೇಶ್ವರ ಕೇಂದ್ರ -18ನೇ ಕ್ರಾಸ್‌, ಮಲ್ಲೇಶ್ವರ
  • ಕಲಾಸಿಪಾಳ್ಯ ಕೇಂದ್ರ -ಬಿಎಸ್‌ಎನ್‌ಎಲ್‌ ಕಚೇರಿ, 33/3, ಎಎಂ ಲೇನ್‌, ಕಲಾಸಿಪಾಳ್ಯ
  • ಯಶವಂತಪುರ ಕೇಂದ್ರ -ಮಹಾನಗರ ಪಾಲಿಕೆ ಸಂಕೀರ್ಣ, ಯಶವಂತಪುರ
  • ಬನಶಂಕರಿ ಕೇಂದ್ರ -ಬಿಡಿಎ ವಾಣಿಜ್ಯ ಸಂಕೀರ್ಣ, 2ನೇ ಹಂತ, ಬನಶಂಕರಿ
  • ವಿಜಯನಗರ ಕೇಂದ್ರ -ಮಾಗಡಿ ರೋಡ್‌, ಬಿಡಿಎ ವಾಣಿಜ್ಯ ಸಂಕೀರ್ಣ, ವಿಜಯನಗರ
  • ಜೆ.ಪಿ.ನಗರ ಕೇಂದ್ರ -ಸಹಾಯಕ ಕಾರ್ಯಪಾಲಕ ಅಭಿಯಂತರರು, ಎಸ್‌6, ಉಪವಿಭಾಗ, 14ನೇ ಕ್ರಾಸ್‌, 1ನೇ ಹಂತ, ಜೆ.ಪಿ.ನಗರ
  • ನಾಗರಬಾವಿ ಕೇಂದ್ರ -ಬಿಡಿಎ ವಾಣಿಜ್ಯ ಸಂಕೀರ್ಣ, 2ನೇ ಹಂತ, 3ನೇ ಬ್ಲಾಕ್‌, ನಾಗರಬಾವಿ
  • ಆರ್‌.ಟಿ.ನಗರ ಕೇಂದ್ರ -ನಗರ ಕೇಂದ್ರ ಗ್ರಂಥಾಲಯ, ಪೂರ್ವ ವಲಯ, 1ನೇ ಮುಖ್ಯರಸ್ತೆ, ಆರ್‌.ಟಿ.ನಗರ
  • ದಿವ್ಯಶ್ರೀ ಚೆಂಬರ್ಸ್‌ ಕೇಂದ್ರ -ಹಾಕಿ ಸ್ಪೇಡಿಯಂ ಹತ್ತಿರ, ಶಾಂತಿನಗರ
  • ಎಚ್‌.ಬಿ.ಆರ್‌.ಕೇಂದ್ರ -ಬಿಡಿಎ ವಾಣಿಜ್ಯ ಸಂಕೀರ್ಣ, 1ನೇ ಹಂತ, 2ನೇ ಬ್ಲಾಕ್‌, ಎಚ್‌ಬಿಆರ್‌ ಲೇಔಟ್‌
  • ವಿಮಾನ ನಿಲ್ದಾಣ ಕೇಂದ್ರ -ಸಹಾಯಕ ಕಾರ್ಯಪಾಲಕ ಅಭಿಯಂತರರು, ಎಸ್‌7.ಉಪವಿಭಾಗ, ಬೆಸ್ಕಾಂ, ವಿಮಾನ ನಿಲ್ದಾಣ ರಸ್ತೆ
  • ಟ್ಯಾನರಿ ರೋಡ್‌ ಕೇಂದ್ರ -ಕೆಇಬಿ ಕಚೇರಿ, ಪಿಳ್ಳಣ್ಣ ಗಾರ್ಡನ್‌, ಟ್ಯಾನರಿ ರಸ್ತೆ
(ಏಜನ್ಸೀಸ್‌)

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+