‘ಭಾಗ್ಯಜ್ಯೋತಿ’ ಬಳಕೆಗೆ ಕಡಿವಾಣ, ಮಿತಿಮೀರಿದ ವಿದ್ಯುತ್‌ಗೆ ಶುಲ್ಕ
‘ಭಾಗ್ಯಜ್ಯೋತಿ’ ಬಳಕೆಗೆ ಕಡಿವಾಣ, ಮಿತಿಮೀರಿದ ವಿದ್ಯುತ್‌ಗೆ ಶುಲ್ಕ
ಭಾಗ್ಯಜ್ಯೋತಿ ಯೋಜನೆಯ ಎಲ್ಲ ಮನೆಗಳಿಗೂ ಮೀಟರ್ ಅಳವಡಿಕೆ
ಭಾಗ್ಯಜ್ಯೋತಿ ಯೋಜನೆಯಡಿ ತಿಂಗಳಿಗೆ 18 ಯುನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದ್ದು , 18 ಯುನಿಟ್‌ಗೂ ಹೆಚ್ಚಿನ ಬಳಕೆಯ ವಿದ್ಯುತ್‌ಗೆ ಶುಲ್ಕ ವಿಧಿಸಲು ತೀರ್ಮಾನಿಸಿದೆ ಎಂದು ಕಂದಾಯ ಮತ್ತು ಇಂಧನ ಸಚಿವ ಎಚ್.ಡಿ.ರೇವಣ್ಣ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
2005ರ ಜೂನ್ ವೇಳೆಗೆ ಭಾಗ್ಯಜ್ಯೋತಿ ಯೋಜನೆಯ ಎಲ್ಲ ಮನೆಗಳಿಗೂ ಮೀಟರ್ ಅಳವಡಿಸಲಾಗುವುದು. ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಭಾಗ್ಯಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ರೇವಣ್ಣ ಹೇಳಿದರು.
ಭಾಗ್ಯಜ್ಯೋತಿ ಯೋಜನೆಯಡಿ ಒಂದು ಬಲ್ಬ್ ಬಳಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲವರು ಟೀವಿ, ಫ್ಯಾನ್ ಹಾಗೂ ಇನ್ನಿತರೆ ವಿದ್ಯುತ್ ಪ್ರಕರಣಗಳನ್ನು ಬಳಸುತ್ತಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿರುವುದಾಗಿ ರೇವಣ್ಣ ತಿಳಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications