ರೆಸಿಡೆಸ್ಸಿ ರಸ್ತೆ ಏಕಮುಖ ಸಂಚಾರ ವಾಪಸ್ಸಾತಿಗೆ ಶಾಸಕರ ಒತ್ತಾಯ
ರೆಸಿಡೆಸ್ಸಿ ರಸ್ತೆ ಏಕಮುಖ ಸಂಚಾರ ವಾಪಸ್ಸಾತಿಗೆ ಶಾಸಕರ ಒತ್ತಾಯ
ಶ್ರೀಮಂತರ ಪಾರ್ಕಿಂಗ್ ಅನುಕೂಲಕ್ಕಾಗಿ ಒಮ್ಮುಖ ವ್ಯವಸ್ಥೆ !
ಬಾಲ್ಡ್‌ವಿನ್ ಮತ್ತು ಬಿಷಪ್‌ಕಾಟನ್ ಶಾಲೆಗಳಿಗೆ ಬರುವ ಶ್ರೀಮಂತ ಪೋಷಕರ ವಾಹನಗಳ ಪಾರ್ಕಿಂಗ್‌ಗೆ ಅನುಕೂಲವಾಗುವಂತೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ಏಕಮುಖ ಸಂಚಾರವನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ಡಿ.20ರ ಸೋಮವಾರ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಶಾಸಕ ರಘು ಎಚ್ಚರಿಕೆ ನೀಡಿದ್ದಾರೆ.
ರೆಸಿಡೆಸ್ಸಿ ರಸ್ತೆ ಹಾಗೂ ರಿಚ್ಮಂಡ್ ರಸ್ತೆಯ ಏಕಮುಖ ವಾಹನ ಸಂಚಾರ ವ್ಯವಸ್ಥೆಯು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಆರೋಪಿಸಿದರು.
ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಏಕ ಮುಖ ಸಂಚಾರ ಜಾರಿಗೊಳಿಸುವುದೊಂದೇ ಅಂತಿಮ ಪರಿಹಾರವಲ್ಲ. ನೂತನ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸುವ ಪೂರ್ವದಲ್ಲಿ ಸಂಚಾರ ವ್ಯವಸ್ಥೆಯಿಂದ ಆಗುವ ಪರಿಣಾಮದ ಬಗ್ಗೆ ಅಧಿಕಾರಿಗಳಿಗೆ ಗಮನವಿರಬೇಕು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಹೇಳಿದರು.
ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರೊಡನೆ ಸಮಾಲೋಚನೆ ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಏಕಮುಖ ಸಂಚಾರ ವ್ಯವಸ್ಥೆಯಿಂದ ಟ್ರಾಫಿಕ್ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದು ತಪ್ಪು ಕಲ್ಪನೆಯಿಂದ ಹೊರಬರಬೇಕು ಎಂದು ಅವರು ಒತ್ತಾಯಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications