ಕೆಇಆರ್‌ಸಿ ನೂತನ ಅಧ್ಯಕ್ಷರಾಗಿ ಕೆ. ಪಿ. ಪಾಂಡೆ ಅಧಿಕಾರ ಸ್ವೀಕಾರ
ಕೆಇಆರ್‌ಸಿ ನೂತನ ಅಧ್ಯಕ್ಷರಾಗಿ ಕೆ. ಪಿ. ಪಾಂಡೆ ಅಧಿಕಾರ ಸ್ವೀಕಾರ
ಮಥಾಯ್ ನಿವೃತ್ತಿಯಿಂದ ತೆರವಾದ ಸ್ಥಾನ ಭರ್ತಿ
ನವೆಂಬರ್ 16ರಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಫಿಲಿಫೋಸ್ ಮಥಾಯ್ ನಿವೃತ್ತರಾಗಿದ್ದರು. ಮಥಾಯ್ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನವನ್ನು ಕೆ.ಪಿ.ಪಾಂಡೆ ಇದೀಗ ತುಂಬಿದ್ದಾರೆ. ಆಯೋಗದ ಅಧ್ಯಕ್ಷರ ಹುದ್ದೆ 5 ವರ್ಷ ಅವಧಿಯದಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಸದಸ್ಯರಾದ ಎಚ್. ಎಸ್.ಸುಬ್ರಹ್ಮಣ್ಯಂ, ಎಚ್.ಡಿ.ಉಕ್ಕಲಿ, ವಿದ್ಯುತ್ ಸಚಿವ ಎಚ್.ಡಿ.ರೇವಣ್ಣ , ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿಜಯ್ ಗೋರೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್.ವಿ.ನಾಗರಾಜನ್ ಪಾಂಡೆ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications