Get Updates
Get notified of breaking news, exclusive insights, and must-see stories!

ದುರಂತ ಸರಮಾಲೆಗೆ ಮತ್ತೊಂದು ಸೇರ್ಪಡೆ

ದುರಂತ ಸರಮಾಲೆಗೆ ಮತ್ತೊಂದು ಸೇರ್ಪಡೆ

ಹೊಸದಿಲ್ಲಿ : ದೇಶದ ವಿವಿಧ ಕಡೆಗಳಲ್ಲಿ 1995 ರಿಂದೀಚೆಗೆ ಸಂಭವಿಸಿದ ಪ್ರಮುಖ ರೈಲು ದುರಂತಗಳ ವಿವರ ಇಂತಿವೆ.
  • ಮೇ 14, 1995 : ಸೇಲಂನಲ್ಲಿ ಮದ್ರಾಸ್‌-ಕನ್ಯಾಕುಮಾರಿ ಎಕ್ಸ್‌ಪ್ರೆಸ್‌,ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು 52ಸಾವು.
  • ಜೂನ್‌ 1, 1995 : ಪಶ್ಚಿಮ ಬಂಗಾಲ ಮತ್ತು ಒರಿಸ್ಸಾದಲ್ಲಿ ಪ್ರತ್ಯೇಕ ರೈಲು ಅಪಘಾತಗಳಲ್ಲಿ 73 ಮಂದಿ ಸಾವು.
  • ಆಗಸ್ಟ್‌ 20, 1995 : ಉತ್ತರ ಪ್ರದೇಶದ ಫಿರೋಜಾಬಾದ್‌ ರೈಲು ನಿಲ್ದಾಣದಲ್ಲಿ ಪುರುಷೋತ್ತಮ್‌ ಎಕ್ಸ್‌ಪ್ರೆಸ್‌,ಕಾಲಿಂದಿ ಎಕ್ಸ್‌ಪ್ರೆಸ್‌ಗೆ ಅಪ್ಪಳಿಸಿ 400 ಸಾವು.
  • ಏಪ್ರಿಲ್‌ 18, 1996 : ಉತ್ತರ ಪ್ರದೇಶದ ಗೋರಖ್‌ಪುರ ಬಳಿ ಗೋರಖ್‌ಪುರ -ಗೊಂಡಾ ಎಕ್ಸ್‌ಪ್ರೆಸ್ಸ್‌,ಸರಕು ಸಾಗಣೆ ರೈಲಿಗೆ ಡಿಕ್ಕಿ,60 ಸಾವು.
  • ಮೇ 14, 1996 : ಅಲಪ್ಪುಳ ಬಳಿ ಮಾನವ ರಹಿತ ಲೆವೆಲ್‌-ಕ್ರಾಸಿಂಗ್‌ನಲ್ಲಿ ಎರ್ನಾಕುಳಂ -ಕಾಯಂಕುಳಂ ರೈಲು ಬಸ್‌ಗೆ ಡಿಕ್ಕಿ , 35 ಬಲಿ,
  • ಮೇ 25, 1996 : ವಾರಾಣಸಿಯ ಲೆವೆಲ್‌-ಕ್ರಾಸಿಂಗ್‌ನಲ್ಲಿ ಅಲಹಾ ಬಾದ್‌ ರೈಲಿಗೆ ಟ್ರಾಕ್ಟರ್‌ ಡಿಕ್ಕಿ, 35 ಸಾವು.
  • ಡಿಸೆಂಬರ್‌ 30, 1996 : ಆಸ್ಸಾಂನ ಕೋಕ್ರಾಝಾರ್‌ ಮತ್ತು ಫಕೀರಗ್ರಾಮ್‌ ಮಧ್ಯೆ ಸಂಚರಿಸುತ್ತಿದ್ದ ಬ್ರಹ್ಮಪುತ್ರ ಮೇಲ್‌ನಲ್ಲಿ ಬಾಂಬ್‌ ಸ್ಪೋಟಿಸಿ 33 ಜನರ ಮೃತ್ಯು.
  • ಜುಲೈ 28, 1997 : ಹೊಸದಲ್ಲಿಯ ಫರೀದಾಬಾದ್‌ ಬಳಿ ಕರ್ನಾಟಕ ಎಕ್ಸ್‌ಪ್ರೆಸ್‌,ಹಿಮಸಾಗರ್‌ ಎಕ್ಸ್‌ಪ್ರೆಸ್‌ಗೆ ಅಪ್ಪಳಿಸಿ 12 ಸಾವು.
  • ಸೆಪ್ಟೆಂಬರ್‌ 14, 1997 : ಮಧ್ಯಪ್ರದೇಶದ ಬಿಲಾಸ್‌ಪುರ್‌ ಜಿಲ್ಲೆಯಲ್ಲಿ ಅಹಮದಾಬಾದ್‌-ಹೌರಾ ಎಕ್ಸ್‌ಪ್ರೆಸ್‌ನ ಬೋಗಿಗಳು ಹಳಿ ತಪ್ಪಿ ನದಿಗೆ ಉರುಳಿ 81 ಪ್ರಯಾಣಿಕರ ದುರ್ಮರಣ.
  • ಏಪ್ರಿಲ್‌ 4, 1998 : ಮಹಾರಾಷ್ಟ್ರದ ಪರಳಿ ವೈಜನಾಥ್‌ ರೈಲ್ವೆ ನಿಲ್ದಾಣದಲ್ಲಿ ಮನ್‌ಮಾಡ್‌-ಕಾಚೀಗುಡ ಎಕ್ಸ್‌ಪ್ರೆಸ್‌ಗೆ ಸರಕು ಸಾಗಣೆ ರೈಲು ಡಿಕ್ಕಿ, 24ಸಾವು.
  • ಸೆಪ್ಟೆಂಬರ್‌ 24, 1998 : ಆಂಧ್ರದ ಬೊಟ್ಟಲಪಾಲಂ ಗ್ರಾಮದಲ್ಲಿ ಲೆವೆಲ್‌-ಕ್ರಾಸಿಂಗ್‌ನಲ್ಲಿ ರೈಲ್ವೆ ಇಂಜಿನ್‌ ಬಸ್‌ಗೆ ಅಪ್ಪಳಿಸಿ 20 ಸಾವು.
  • ನವೆಂಬರ್‌ 26 , 1998 : ಲೂಧಿಯಾನ ಬಳಿ ಅಮೃತ ಸರ್‌ಗೆ ಬರುತ್ತಿದ್ದ ಗೋಲ್ಡನ್‌ ಟೆಂಪಲ್‌ ಮೇಲ್‌ನ ಬೋಗಿಗಳಿಗೆ ಜಮ್ಮುತ ವಿ- ಸೀಲ್ದಾ ಎಕ್ಸ್‌ಪ್ರೆಸ್‌ ಅಪ್ಪಳಿಸಿ ಕನಿಷ್ಠ 108 ಸಾವು.
  • ಜುಲೈ 6, 1999 : ಮಥುರಾ ಬಳಿ ಹೊಸದಿಲ್ಲಿಗೆ ಹೊರಟಿದ್ದ ಟ್ರಂಕ್‌ ಎಕ್ಸಪ್ರೆಸ್‌ ಹಳಿ ತಪ್ಪಿದ್ದ ಸರಕು ಸಾಗಣೆ ರೈಲಿಗೆ ಅಪ್ಪಳಿಸಿ 17 ಸಾವು.
  • ಡಿಸೆಂಬರ್‌ 3, 2000 : ಪಂಜಾಬ್‌ನ ಸರಾಯ್‌ ಬಂಜಾರಾ-ಸದ್ಗರ್‌ ನಡುವೆ ಹೌರಾ - ಅಮೃತಸರ್‌ ಮೇಲ್‌ ಹಳಿ ತಪ್ಪಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ,46 ಬಲಿ.
  • ಜೂನ್‌ 22, 2001 : ಕೇರಳದ ಕೋಯಿಕ್ಕೋಡ್‌ ಬಳಿ ಮಂಗಳೂರು - ಮದ್ರಾಸ್‌ ಮೇಲ್‌ನ ಮೂರು ಬೋಗಿಗಳು ಹಳಿ ತಪ್ಪಿ ಸರಕು ಸಾಗಣೆ ರೈಲಿಗೆ ಡಿಕ್ಕಿ,46 ಬಲಿ.
  • ಆಗಸ್ಟ್‌ 16, 2001 : ಮಹರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ಹಳಿ ದಾಟುತ್ತಿದ್ದವರು ರೈಲಿನಡಿಗೆ ಸಿಲುಕಿ 15 ಸಾವು.
  • ಆಗಸ್ಟ್‌ 23, 2001 : ಕಾವಲು ರಾಹಿತ ಲೆವೆಲ್‌ ಕ್ರಾಸಿಂಗ್‌ ಬಳಿ ರಾವಿ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದು ಟೆಂಪೋದಲ್ಲಿದ್ದ 11 ಜನರ ದುರ್ಮರಣ.
  • ಸೆಪ್ಟೆಂಬರ್‌ 9, 2002 : ಬಿಹಾರದ ಜೌರಂಗಾಬಾದ್‌ ಜಿಲ್ಲೆಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ನ ಬೋಗಿ ನದಿಗೆ ಉರುಳಿ 100 ಪ್ರಯಾಣಿಕರ ಸಾವು.
  • ಜನವರಿ 5, 2002 : ಮಹಾರಾಷ್ಟ್ರದ ಘಾಟಂದೂರ್‌ ರೈಲ್ವೆ ನಿಲ್ದಾಣದಲ್ಲಿ ಸಿಕಂದರಾಬಾದ್‌- ಮನ್ಮಾಡ್‌ ಎಕ್ಸ್‌ಪ್ರೆಸ್‌ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು 21 ಜನರ ಸಾವು.
  • ಮಾರ್ಚ್‌ 23, 2002 : ಪಟನಾದಿಂದ ಮುಂಬಯಿಗೆ ಸಾಗುತ್ತಿದ್ದ ಲೋಕಮಾನ್ಯ ತಿಲಕ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ 13 ಬೋಗಿಗಳು ಮಧ್ಯಪ್ರದೇಶದ ನರಸಿಂಗ್‌ಪುರ್‌ನಲ್ಲಿ ಹಳಿ ತಪ್ಪಿ 7ಸಾವು.
  • ಮೇ 15, 2003 : ಅಮೃತಸರಕ್ಕೆ ತೆರಳುತ್ತಿದ್ದ ರೈಲಿನ ಮೂರು ಬೋಗಿಗಳಿಗೆ ಬೆಂಕಿ ಹತ್ತಿ 38 ಜನರ ದುರ್ಮರಣ.
  • ಜೂನ್‌ 22, 2003 : ಕೊಂಕಣ ರೈಲ್ವೆ ಇತಿಹಾಸದಲ್ಲಿ ನಡೆದ ಮೊದಲ ಭೀಕರ ಸಮೀಪ ಕಾರವಾರ- ಮುಂಬೈ ವಿಶೇಷ ರೈಲು ಹಳಿ ತಪ್ಪಿ ಸಂಭಲಿಸಿದ ಈ ದುರಂತದಲ್ಲಿ 25 ಜನ ಗಾಯಗೊಂಡಿದ್ದರು.
  • ಜುಲೈ 2, 2003 : ರೈಲೊಂದರ ಇಂಜಿನ್‌ ಮತ್ತು ಅದಕ್ಕೆ ಜೋಡಿಸಿದ್ದ ಎರಡು ಬೋಗಿಗಳು ವಾರಂಗಲ್‌ನಲ್ಲಿ ಸೇತುವೆಯಿಂದ ಉರುಳಿ ಬೋಗಿ ಹಾಗೂ ಕೆಳಗಿದ್ದ ಮೀನಿನ ಮಾರುಕಟ್ಟೆಯ 18 ಜನರ ಸಾವು.
  • ಫೆಬ್ರುವರಿ 27, 2004 : ಪಶ್ಚಿಮ ಬಂಗಾಲದ ದಿನಾಜ್‌ಪುರ್‌ನ ಲೆವೆಲ್‌ ಕ್ರಾಸಿಂಗ್‌ನಲ್ಲಿ ಗುವಾಹಟಿಗೆ ತೆರಳುತ್ತಿದ್ದ ಕಾಂಚನ್‌ಜಾಂಗಾ ಎಕ್ಸ್‌ಪ್ರೆಸ್‌ ಟ್ರಕ್‌ಗೆ ಅಪ್ಪಳಿಸಿ 30 ಜನರ ದುರ್ಮರಣ.
(ಸ್ನೇಹ ಸೇತು ವಿಜಯ ಕರ್ನಾಟಕ )

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+