ವಿಶ್ವದ ಪ್ರಭಾವಿಉದ್ಯಮಿಗಳ ಸಾಲಿನಲ್ಲಿ ಭಾರತದ ವಿವೇಕ್‌-ಬಾಲಾಜಿ

ವಿಶ್ವದ ಪ್ರಭಾವಿಉದ್ಯಮಿಗಳ ಸಾಲಿನಲ್ಲಿ ಭಾರತದ ವಿವೇಕ್‌-ಬಾಲಾಜಿ
ಜನರಲ್‌ ಎಲೆಕ್ಟ್ರಿಕ್‌ನ ಜೆಫರಿ ಇಮ್ಮೆಲ್ಟ್‌ ಗೆ ಪ್ರಥಮ, ಎಡ್‌ ಬ್ರೀನ್‌ಗೆ ದ್ವಿತಿಯ ಸ್ಥಾನ

ನವದೆಹಲಿ : ಜಗತ್ತಿನ ಅತ್ಯಂತ ಪ್ರಭಾವಶಾಲಿ ಉದ್ಯಮಿಗಳ ಪಟ್ಟಿಯಲ್ಲಿ ಭಾರತದ ಇಬ್ಬರು ಸ್ಥಾನ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ವಿಪ್ರೋ ಟೆಕ್ನಾಲಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವಿಪ್ರೋದ ಉಪಾಧ್ಯಕ್ಷ ವಿವೇಕ್‌ ಪೌಲ್‌ ಮತ್ತು ಒರೆಗನ್‌ನ ಪ್ಲಾನರ್‌ ಸಿಸ್ಟಮ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಾಜಿ ಕೃಷ್ಣಮೂರ್ತಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಟೈಮ್‌ ಮ್ಯಾಗಜಿನ್‌ ಮತ್ತು ಸಿಎನ್‌ಎನ್‌ನ ಬಿಸಿನೆಸ್‌ ಇನ್‌ಪ್ಲ್ಯುಯೆನ್ಸಿಯಲ್ಸ್‌ನ ಈ ಪಟ್ಟಿಯಲ್ಲಿ ವಿಶ್ವದ 25 ಮಂದಿಯನ್ನು ಗುರ್ತಿಸಲಾಗಿದೆ.

ಗ್ಲೋಬಲ್‌ಲಿಸ್ಟ್‌ ಕೆಟೋಗರಿಯಲ್ಲಿ ವಿವೇಕ್‌ ಪೌಲ್‌ ಅವರೊಂದಿಗೆ ಬೀಜಿಂಗ್‌ನಲ್ಲಿರುವ ಟಿಸಿಎಸ್‌ನ ಅಧ್ಯಕ್ಷ ಲಿ ಡೋಂಗ್‌ ಶೆಂಗ್‌, ಘಾನಾದ ಅಸಾಂತಿ ಗೋಲ್ಡ್‌ ಫೀಲ್ಡ್ಸ್‌ನ ಸ್ಯಾಮ್‌ ಜೋನ್ಹ, ನ್ಯೂಯಾರ್ಕ್‌ನ ಎಂಟಿವಿ ನೆಟ್‌ವಕ್ಸ್‌ನ ಅಧ್ಯಕ್ಷ ಮತ್ತು ಸಿಇಒ ಜೂಡಿ ಮೆಕ್‌ಗ್ರಾಥ್‌ ಸಹಾ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯ ಪ್ರಕಾರ ಜನರಲ್‌ ಎಲೆಕ್ಟ್ರಿಕ್‌ನ ಜೆಫರಿ ಇಮ್ಮೆಲ್ಟ್‌ ಮೊದಲ ಸ್ಥಾನದಲ್ಲಿ, ಟೈಕೋದ ಎಡ್‌ ಬ್ರೀನ್‌ ಎರಡನೇ ಸ್ಥಾನದಲ್ಲಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇರಾಕ್‌ನ ಸಿನಾನ್‌ ಅಲ್‌-ಷಬೀಬಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಬಾಲಾಜಿ ಕೃಷ್ಣ ಮೂರ್ತಿ ಏಳನೇ ಸ್ಥಾನದಲ್ಲಿ, ವಿವೇಕ್‌ ಪೌಲ್‌ ಹದಿನಾರನೇ ಸ್ಥಾನದಲ್ಲಿದ್ದಾರೆ.

(ಏಜನ್ಸೀನ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+