ಕಪಿಲ್ ದಾಖಲೆ ಹಿಂದಿಕ್ಕಿದ ಕುಂಬ್ಳೆ ಭಾರತದ ಅತ್ಯುತ್ತಮ ಬೌಲರ್!
ಕಪಿಲ್ ದಾಖಲೆ ಹಿಂದಿಕ್ಕಿದ ಕುಂಬ್ಳೆ ಭಾರತದ ಅತ್ಯುತ್ತಮ ಬೌಲರ್!
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನ್ನುವ ಹಿರಿಮೆ
ಡಿ.10ರಂದು ಢಾಕಾದ ಬಂಗಬಂಧು ಕ್ರೀಡಾಂಗಣದಲ್ಲಿ ಆರಂಭವಾದ ಬಾಂಗ್ಲಾ ವಿರುದ್ಧದ ಪ್ರಥಮ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನವೇ ಕುಂಬ್ಳೆ ಅವರು ಈ ಮೇರು ಸಾಧನೆ ಮೆರೆದರು. ಮೊಹಮ್ಮದ್ ರಫೀಕ್ ಅವರ ವಿಕೆಟ್ಟನ್ನು ಕಬಳಿಸುತ್ತಿದ್ದಂತೆಯೇ ಈವರೆಗೂ ಕಪಿಲ್‌ದೇವ್ ಹೆಸರಿನಲ್ಲಿದ್ದ 434 ವಿಕೆಟ್‌ಗಳ ಸಾಧನೆ ಹಿಂದಾಗಿ, ಕುಂಬ್ಳೆ ಭಾರತದ ಅತ್ಯುತ್ತಮ ಟೆಸ್ಟ್ ಬೌಲರ್‌ಗಳ ಯಾದಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದರು.
ರಫೀಕ್ ನಂತರ ಮತ್ತೂ ಒಂದು ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ತಮ್ಮ ವಿಕೆಟ್ ಗಳಿಕೆಯನ್ನು 436ಕ್ಕೇರಿಸಿಕೊಂಡಿದ್ದಾರೆ. ಅವರ ಮುಂದಿನ ಗುರಿ 500 ವಿಕೆಟ್‌ಗಳು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications