ಸೋನಿಯಾ ಮೇಡಂ 58ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ
ಸೋನಿಯಾ ಮೇಡಂ 58ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ
ಪ್ರಧಾನಿ ಮನಮೋಹನ್ ಸಿಂಗ್, ಮುಖ್ಯಮಂತ್ರಿ ಧರ್ಮಸಿಂಗ್ ಶುಭ ಹಾರೈಕೆ
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಾಗೂ ಅವರ ಮಂತ್ರಿ ಮಂಡಲದ ಶಿವರಾಜ್ ಪಾಟೀಲ್, ಅರ್ಜುನ್ ಸಿಂಗ್, ಪಿ. ಚಿದಂಬರಂ ಮತ್ತಿತರ ಪಕ್ಷದ ಮುಖಂಡರು ಸೋನಿಯಾ ನಿವಾಸ ‘10 ಜನಪದ್’ಗೆ ತೆರಳಿ, ಜನ್ಮದಿನದ ಶುಭಾಶಯ ಕೋರಿದರು. ವಿವಿಧ ರಾಜ್ಯಗಳ ರಾಜಕೀಯ ಮುಖಂಡರು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ, ಅವರಿಗೆ ಒಳ್ಳೆಯ ಆರೋಗ್ಯ ಹಾಗೂ ಯಶಸ್ಸಿನ ಜೀವನವನ್ನು ಹಾರೈಸಿದರು.
ಕರ್ನಾಟಕದ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಉತ್ತರಾಂಚಲ ಮುಖ್ಯಮಂತ್ರಿ ಎನ್.ಡಿ.ತಿವಾರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ಅಲ್ಲದೇ ಪಕ್ಷದ ಸಂಸದರು, ಶಾಸಕರು ಭೇಟಿ ಮಾಡಿ ಸೋನಿಯಾಗೆ ಶುಭಾಶಯ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications