ನಿಜಲಿಂಗಪ್ಪ ಆತ್ಮಕಥೆ ‘ನನ್ನ ಜೀವನ ಮತ್ತು ರಾಜಕೀಯ’ ಡಿ.10 ಬಿಡುಗಡೆ
ನಿಜಲಿಂಗಪ್ಪ ಆತ್ಮಕಥೆ ‘ನನ್ನ ಜೀವನ ಮತ್ತು ರಾಜಕೀಯ’ ಡಿ.10 ಬಿಡುಗಡೆ
ಸಚಿವ ಎಂ.ಪಿ. ಪ್ರಕಾಶ್‌ರಿಂದ ನಿಜಲಿಂಗಪ್ಪನವರ ಆತ್ಮಕತೆಯ ಕನ್ನಡ ಅವತರಣಿಕೆ
ನಿಜಲಿಂಗಪ್ಪ ಅವರ ಜೀವನ, ರಾಜಕೀಯ ಬದುಕು, ರಾಜಕೀಯ ಸೇವೆ, ತತ್ವ, ಸಿದ್ಧಾಂತ, ಆದರ್ಶ, ಕನಸು, ಒಡನಾಟಗಳು ಇಂಗ್ಲಿಷ್ ಭಾಷೆಯ ‘ಮೈ ಲೈಫ್ ಅಂಡ್ ಪಾಲಿಟಿಕ್ಸ್’ ಕೃತಿಯಲ್ಲಿ ಪ್ರತಿಬಿಂಬಿಸಿದ್ದವು. ಅದರ ಕನ್ನಡ ಅನುವಾದವನ್ನು ಕಂದಾಯ ಸಚಿವ ಎಂ.ಪಿ. ಪ್ರಕಾಶ್ ಮಾಡಿದ್ದಾರೆ. ಪುಸ್ತಕದ ಹೆಸರು- ‘ನನ್ನ ಜೀವನ ಮತ್ತು ರಾಜಕೀಯ’
ಕೃತಿಯ ಬಿಡುಗಡೆ ಸಮಾರಂಭವನ್ನು ನಗರದ ಚಿತ್ರಕಲಾ ಪರಿಷತ್‌ನಲ್ಲಿ, ಡಿಸೆಂಬರ್ 10ರಂದು ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ. ಕೃತಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಿಡುಗಡೆ ಮಾಡುವರು. ಈ ಪುಸ್ತಕ ಕುರಿತು ಡಾ.ಯು.ಆರ್.ಅನಂತಮೂರ್ತಿ ಮಾತನಾಡುವರು. ಸಚಿವ ಪಿ.ಜಿ. ಆರ್.ಸಿಂಧ್ಯ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ನಿಜಲಿಂಗಪ್ಪ ಪ್ರತಿಷ್ಠಾನ ರಾಜಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಯಾಬ್ಬರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications