ದುಬೈ ಮೇಳದಲ್ಲಿ ಭಾರತೀಯತೆ ಹಾಗೂ ಕರ್ನಾಟಕ ಶಿಲ್ಪ ಸಂಸ್ಕೃತಿ
ದುಬೈ ಮೇಳದಲ್ಲಿ ಭಾರತೀಯತೆ ಹಾಗೂ ಕರ್ನಾಟಕ ಶಿಲ್ಪ ಸಂಸ್ಕೃತಿ
2005ರ ಜನವರಿ 12ರಿಂದ ಜಾಗತಿಕ ಆಕರ್ಷಣೆಯ ದುಬೈ ಮೇಳ ಶುರು
ಪ್ರತಿಷ್ಠಿತ ದುಬೈ ಮೇಳದಲ್ಲಿ ದೇಶವಿದೇಶದ ಲಕ್ಷಾಂತರ ಮಂದಿ ಭಾಗವಹಿಸುತ್ತಾ ರೆ. ಈ ವರ್ಷದ ಉತ್ಸವದ ಶಾಪಿಂಗ್‌ನಲ್ಲಿ ಭಾರತೀಯ ಮಳಿಗೆಗಳೇ ಪ್ರಮುಖ ಆಕರ್ಷಣೆ. ಮಾರಾಟ ಮಳಿಗೆಗಳಲ್ಲಿ ಹೆಚ್ಚೆಚ್ಚು ಭಾರತೀಯ ವಸ್ತುಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯರನ್ನು ಸೆಳೆಯಲಾಗುವುದು ಎಂದು ಭಾರತೀಯ ಕಾನ್ಸಲೇಟ್ ಜನರಲ್ ವೈ.ಕೆ. ಸಿನ್ಹಾ ತಿಳಿಸಿದ್ದಾರೆ.
ಇಷ್ಟೇ ಅಲ್ಲ , ಯುನೆಸ್ಕೋ ಸಂರಕ್ಷಿತ ಪರಂಪರೆ ಸ್ಮಾರಕಗಳ ಪಟ್ಟಿಯಲ್ಲಿರುವ ವಿಶ್ವ ವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕಗಳ ಪ್ರತಿಕೃತಿಗಳೂ ದುಬೈ ಮೇಳದಲ್ಲಿ ಇರಲಿವೆ. ವಾಣಿಜ್ಯ-ಸಂಸ್ಕೃತಿ ಎರಡೂ ಕಾರಣಗಳಿಗಾಗಿ ಮೇಳ ಬಳಕೆಯಾಗುತ್ತಿರುವುದು ವಿಶೇಷ.
ಅಂದಹಾಗೆ, ಜನವರಿ 12ರಿಂದ ಮಾರ್ಚ್ 31ರವರೆಗೆ ದುಬೈ ಮೇಳ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications