‘ಕಾಂಡೋಮ್’ಗೊಂದು ಬದಲಿ ಹೆಸರು ; ನೀವು ಸೂಚಿಸುವಿರಾ?
‘ಕಾಂಡೋಮ್’ಗೊಂದು ಬದಲಿ ಹೆಸರು ; ನೀವು ಸೂಚಿಸುವಿರಾ?
ಕೊರಿಯಾದಲ್ಲಿ ಕಾಂಡೋಮ್ ಹೆಸರಿಗೆ ಭಾರೀ ವಿರೋಧ
ಕಾಂಡೋಮ್ ಪದದ ಬಳಕೆಯಿಂದ ಅದನ್ನು ದಕ್ಷಿಣ ಕೊರಿಯಾದಲ್ಲಿ ಗುರ್ತಿಸಲು ಕಷ್ಟವಾಗುತ್ತಿದೆ. ಅದೇ ಉಚ್ಚಾರಣೆಯ ಇತರೆ ವಸ್ತುಗಳಿರುವುದರಿಂದ ಈ ಗೊಂದಲ. ವಸ್ತುಗಳ ಹೆಸರಷ್ಟೇ ಅಲ್ಲ , ಕೆಲವರ ಹೆಸರು ಕೂಡ ಕಾಂಡೋಮ್ ಎಂದಿದೆ. ಹೀಗಾಗಿ ಕಾಂಡೋಮ್‌ಗೆ ಪರ್ಯಾಯ ನಾಮಕರಣ ಮಾಡಲು ಕೊರಿಯನ್ನರು ಉತ್ಸುಕರಾಗಿದ್ದಾರೆ.
ಕಾಂಡೋಮ್ ಪದದ ಬಳಕೆಯಿಂದ ಏನೆಲ್ಲಾ ರಗಳೆಗಳಾಗಿವೆ ಗೊತ್ತಾ? ಉದಾಹರಣೆಗೆ ಈ ಮುದುಕಿಯ ಗೋಳನ್ನೇ ನೋಡಿ. ಆಕೆಯ ಮೊಮ್ಮಗ ದಿನವೂ ಗೇಲಿ ಮಾಡುತ್ತಾನಂತೆ. ಕಾರಣ ಆಕೆಯ ಹೆಸರು ಕಾಂಡೋಮ್ ಎಂದಿರುವುದು. ಮೊಮ್ಮಗನ ಗೇಲಿಯಿಂದಾಗಿ ತನ್ನ ಹೆಸರಿನ ಬಗೆಗೇ ಅಜ್ಜಿಗೆ ಬೇಸರ ಬಂದುಬಿಟ್ಟಿದೆ.
ಜನರ ಅವಶ್ಯಕತೆಗೆ ಸ್ಪಂದಿಸಿ, ಹಳೆಯ ಹೆಸರನ್ನು ಬದಿಗೆ ಸರಿಸಿ ಹೊಸ ಹೆಸರನ್ನು ಜಾರಿಗೆ ತರಲು ಏಡ್ಸ್ ವಿರೋಧಿಒಕ್ಕೂಟ ಕೂಡಾ ಮುಂದಾಗಿದೆ ಎನ್ನುತ್ತಾರೆ ಒಕ್ಕೂಟದ ಅಧಿಕಾರಿ ಕಿಮ್ ಹೋನ್-ಸೋ.
ನಾಮಕರಣದ ನಿಟ್ಟಿನಲ್ಲಾದ ಪ್ರಗತಿಯೆಂದರೆ- ‘aepil’ ಪದದ ಆವಿಷ್ಕಾರ. ಈ ಪದವನ್ನು ಕಾಂಡೋಮ್‌ಗೆ ಪರ್ಯಾಯವಾಗಿ ಬಳಸಲು ಸಾರ್ವಜನಿಕರು ಸೂಚಿಸಿದ್ದಾರೆ. ಚೀನೀ ಭಾಷೆಯಲ್ಲಿ ‘aepil’ಪದದ ಅರ್ಥ -ಪ್ರೀತಿ ಮತ್ತು ಅವಶ್ಯಕತೆ! ಯನ್ನು ಈ ಪದ ವ್ಯಕ್ತಪಡಿಸುತ್ತದೆ ಎಂದು ಫೆಡರೇಷನ್ ಅಧಿಕಾರಿ ತಿಳಿಸಿದ್ದಾರೆ.
ಕಾಂಡೋಮ್ ಬಗ್ಗೆ ಇಷ್ಟೆಲ್ಲಾ ತಲೆ ಕೆಡಿಸಿಕೊಂಡರೂ ದಕ್ಷಿಣ ಕೊರಿಯಾದಲ್ಲಿ ಕಾಂಡೋಮ್ ಬಳಸುವವರ ಸಂಖ್ಯೆಯೇನೂ ಅಬ್ಬಬ್ಬ ಅನ್ನುವಂತೇನೂ ಇಲ್ಲ . ಲೈಂಗಿಕ ಕ್ರಿಯೆಯಲ್ಲಿ ಕೇವಲ ಶೇ. 10 ರಷ್ಟು ಮಂದಿ ಮಾತ್ರ ಕೊರಿಯಾದಲ್ಲಿ ಕಾಂಡೋಮ್ ಬಳಸುತ್ತಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications